ಬೋಸರಾಜು, ಶರಣುಪ್ರಕಾಶ ಪಾಟೀಲ್ ನಡುವೆ ವಾಗ್ವಾದ : ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋದ ಗಲಾಟೆ..!

K 2 Kannada News
ಬೋಸರಾಜು, ಶರಣುಪ್ರಕಾಶ ಪಾಟೀಲ್ ನಡುವೆ ವಾಗ್ವಾದ : ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋದ ಗಲಾಟೆ..!
Oplus_16908288
WhatsApp Group Join Now
Telegram Group Join Now

K2Kannadanews.in

Political News ರಾಯಚೂರು : ಸೋಮವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಿ ಎಲ್ ಪಿ (Congress Legislature Party meeting) ಸಭೆಯಲ್ಲಿ, ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿವೆ. ಆಂತರಿಕವಾಗಿ ನಡೆದ ಈ ಸಭೆಯಲ್ಲಿ ಕಾಂಗ್ರೆಸ್‌ (Congress) ನಾಯಕರ ಅಸಮಾಧಾನ ಭುಗಿಲೆದ್ದಿದೆ. ಮತ್ತೊಂದೆಡೆ ಇಬ್ಬರು ಸಚಿವರು (Minister) ಕೂಡ ಪರಸ್ಪರ ಕಿತ್ತಾಡಿಕೊಂಡು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ರಾಯಚೂರು (Raichur) ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಚಿವದ್ವಯರ ಮಧ್ಯ ಮಾತಿನ ಚಕಮಕಿ ನಡೆದಿದೆ. ರಾಯಚೂರು ಜಿಲ್ಲೆಯ ಅಧಿಕಾರಿಗಳ (Officer) ವರ್ಗಾವಣೆ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಎನ್‌.ಎಸ್‌. ಬೋಸರಾಜು(N S Boseraju), ನಾನು ರಾಯಚೂರು ಜಿಲ್ಲೆಯವನು. ವರ್ಗಾವಣೆ ವಿಚಾರಕ್ಕೆ ನೀವು ಯಾಕೆ ಪತ್ರ ನೀಡುತ್ತೀರಾ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ (sharan Prakash Patil) ಅವರನ್ನು ಪ್ರಶ್ನಿಸಿದರು. ಅದಕ್ಕೆ ಶರಣಪ್ರಕಾಶ್ ಪಾಟೀಲ, ನಾನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ. ಸ್ಥಳೀಯ ಶಾಸಕರು ಕೇಳಿದ ಕಾರಣಕ್ಕೆ ಪತ್ರ ನೀಡಿದ್ದೇನೆ. ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವುದು ನನ್ನ ಕೆಲಸ ಎಂದು ತಿರುಗೇಟು ಕೊಟ್ಟಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಕೊನೆಗೆ ಅಲ್ಲಿದ್ದ ಶಾಸಕರೆಲ್ಲ ಮಧ್ಯಪ್ರವೇಶಿಸಿ ಇಬ್ಬರೂ ಸಚಿವರನ್ನು ಕೂಲ್‌ ಮಾಡಿದ್ದಾರೆ ಎನ್ನಲಾಗಿದೆ.

ವರ್ಗಾವಣೆಗೆ ಸಂಬಂಧಿಸಿದಂತೆ, ಶಾಸಕ ಬಸನಗೌಡ ದದ್ದಲ್ ಅವರಿಗೆ ಶರಣಪ್ರಕಾಶ್ ಪಾಟೀಲ ಪತ್ರ ಕೊಟ್ಟಿದ್ದರು. ಇದು ಬೋಸರಾಜು ಅವರನ್ನು ಕೆರಳಿಸಿತ್ತು. ನನ್ನನ್ನು ಕೇಳದೆ ಹೇಗೆ ಪತ್ರ ಕೊಟ್ಟಿದ್ದೀರಿ ಎಂದು ಬೋಸರಾಜು ಮರು ಪ್ರಶ್ನಿಸಿದ್ದು, ಇಬ್ಬರು ಸಚಿವರ ನಡುವೆ ಜಟಾಪಟಿಗೆ ಕಾರಣವಾಯಿತು ಎಂದು ಗೊತ್ತಾಗಿದೆ.

WhatsApp Group Join Now
Telegram Group Join Now
Share This Article