K2kannadanews.in
Good News ಸಿರವಾರ : ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಲ್ಲಿ ವಿವಿಧ ಕೌಶಲ್ಯ ಅಭಿವೃದ್ಧಿ ಮತ್ತು ವಿದ್ಯಾರ್ಥಿನಿಯರ ಏಳಿಗೆಗೆ ನಾಂದಿ ಫೌಂಡೇಶನ್ (Naandi Foundation) ಉತ್ತಮ ಕಾರ್ಯ ಮಾಡುತ್ತಿದೆ ಇದು ಶ್ಲಾಘನಾರ್ಹ ಎಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣಬಸಪ್ಪ ಅವರು ಹೇಳಿದರು.
ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ (Kittur Rani Chennamma Residential School), ವಿದ್ಯಾರ್ಥಿನಿಯರಿಗೆ ಕಳೆದ ಹತ್ತು ದಿನಗಳಿಂದ ವಿವಿಧ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನ ನೀಡಲಾಯಿತು. ಅಲ್ಲದೆ ವಿದ್ಯಾರ್ಥಿನಿಯರಿಗೆ ಕಿಟ್ಟ್ ಗಳು ಮತ್ತು ವಾಟರ್ ಬಾಟಲ್ ಗಳ ವಿತರಣೆ ಮಾಡುವ ಮುಖಾಂತರ, ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ತುಂಬುವಂತಹ ಕೆಲಸ ನಾಂದಿ ಫೌಂಡೇಶನ್ ವತಿಯಿಂದ ಮಾಡಲಾಯಿತು. ಪ್ರಸ್ತುತ ಶೈಕ್ಷಣಿಕ ವಿಚಾರದಲ್ಲಿ ವಿದ್ಯಾರ್ಥಿನಿಯರಿಗೆ ಅವಶ್ಯಕತೆ ಇರುವ ಕೌಶಲ್ಯ ತರಬೇತಿಗಳನ್ನು ನಾಂದಿ ಫೌಂಡೇಶನ್ ವತಿಯಿಂದ ನೀಡಲಾಗುತ್ತಿದ್ದು, ಇದು ಶ್ಲಾಘನಾರ್ಹ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲರಾದ ಶರಣಬಸಪ್ಪ ಹೇಳಿದರು.
ಕಳೆದ ತಿಂಗಳಿನಲ್ಲಿ ವಿದ್ಯಾರ್ಥಿನಿಯರಿಗೆ ಅವಶ್ಯಕತೆ ಇರುವ ಕಿಟ್ಟ್ ವಿತರಣೆ ಮಾಡಲಾಯಿತು. ಇದೀಗ ವಿದ್ಯಾರ್ಥಿನಿಯರಿಗೆ ವಾಟರ್ ಬಾಟಲ್ ವಿತರಣೆ ಮಾಡುವ ಮುಖಾಂತರ ವಿದ್ಯಾರ್ಥಿನಿಯರಿಗೆ ನಾಂದಿ ಫೌಂಡೇಶನ್ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದರು. ಈ ವೇಳೆ ಬಾಟಲ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನೀಲಕಂಠ ಸ್ವಾಮಿ ಅವರು ಉಪಸ್ಥಿತರಿದ್ದರು.