K2kannadanews.in
Leopard Captured ರಾಯಚೂರು : ಹಲವು ದಿನಗಳಿಂದ ಪ್ರತ್ಯಕ್ಷವಾಗಿ ಜಾನುವಾರುಗಳನ್ನು ಕೊಂದು ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಹೌದು ರಾಯಚೂರು ತಾಲ್ಲೂಕಿನ ಮಲಿಯಾಬಾದ್ ಗ್ರಾಮದಲ್ಲಿ ಹಲವು ದಿನಗಳ ಹಿಂದೆ, ಚಿರತೆಯೊಂದು ಪ್ರತ್ಯಕ್ಷವಾಗಿತ್ತು. ಕುರಿ ಹಸುಗಳನ್ನ ಕೊಂದು ಜನರಲ್ಲಿ ಭಯ ಹುಟ್ಟಿಸಿತು ಇತ್ತೀಚಿಗೆ ಮಲೆಯಬಾದ್ ಗ್ರಾಮದಲ್ಲಿ ಇರುವ ಗೋಶಾಲೆಗೆ ನುಗ್ಗಿ ಹಸು ಒಂದನ್ನ ಕೊಂದು ಹಾಕಿತ್ತು. ಇದರಿಂದ ಗ್ರಾಮದಲ್ಲಿ ಜನರು ಜಮೀನಿಗೆ ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆದಷ್ಟು ಬೇಗನೆ ಚಿರತೆಯನ್ನು ಸೆರೆ ಹಿಡಿಯಲು ಆಗ್ರಹಿಸಿದ್ದರು.
ಗ್ರಾಮಸ್ಥರ ಒತ್ತಾಯದ ಹಿನ್ನಲೆ ಗ್ರಾಮಕ್ಕೆ ಆಗಮಿಸಿ ತಪಾಸಣೆ ನಡೆಸಿ ಕಳೆದ ಐದು ದಿನಗಳಿಂದ ಬೋನ್ ಇರಿಸಲಾಗಿತ್ತು. ಕಳೆದ ರಾತ್ರಿ ಭಯ ಹುಟ್ಟಿಸಿದ್ದ ಚಿರತೆ ಬೋನಿಗೆ ಬಿದ್ದಿದ್ದು, ಸದ್ಯ ಅರಣ್ಯ ಇಲಾಖೆ ಆವರಣದಲ್ಲಿ ಚಿರತೆ ಇರಿಸಲಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.