K2kannadanews.in
Crime News ರಾಯಚೂರು : ಮನೆ ಮಾಲಿಕರು ಊರಿಗೆ ಹೋಗಿದ್ದ ಸಮಯ ನೋಡಿ ಮನೆಗೆ ನುಗ್ಗಿದ ಕಳ್ಳರ ಗುಂಪು ಚಿನ್ನಾಭರಣ, ಹಣ ಕದ್ದು ಪರಾರಿಯಾಗಿದ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.
ಹೌದು ನಗರದ ವೆಂಕಟೇಶ್ವರ ಕಾಲೋನಿ ನಿವಾಸಿ ವೆಂಕಟೇಶ್ವರ ಎಂಬುವರ ಮನೆಯಲ್ಲಿ ಕಳವಾಗಿದೆ. ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಹಿಂಬಾಗಿಲಿನಿಂದ ಒಳಗೆ ನುಗ್ಗಿದ ಕಳ್ಳರ ಗುಂಪು ಚಿನ್ನಾಭರಣ, ಹಣ ಕದ್ದು ಪರಾರಿಯಾಗಿದ್ದಾರೆ. ಕಳೆದ ಫೆ.1 ರಂದು ಕುಟುಂಬದವರು ಬೆಂಗಳೂರಿಗೆ ಹೋಗಿದ್ದರು.
ಈ ವೇಳೆ ಮನೆಗೆ ನುಗ್ಗಿದ ಕಳ್ಳರು ಮನೆಗೆ ನುಗ್ಗಿದ 5 ಜನ ಕಳ್ಳರು 2.5 ಕೆಜಿ ಬೆಳ್ಳಿ, 50 ಸಾವಿರ ನಗದು, ಸೇರಿ ಒಟ್ಟು ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಫೆ.5 ರಂದು ಊರಿನಿಂದ ವಾಪಸ್ಸಾದ ವೇಳೆ ಕಳ್ಳತನವಾದ ವಿಷಯ ತಿಳಿದಿದೆ. ಕಳ್ಳತನ ಘಟನೆಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಶ್ಚಿಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.