K2kannadanews.in
Crime News ಸಿರಾ : ಹೊಟ್ಟೆ ತುಂಬಿಸಿಕೊಳ್ಳಲು ಬೆಂಗಳೂರಿಗೆ ಗುಳೆ ಹೊರಟವರು ಭೀಕರ ಅಪಘಾತದಲ್ಲಿ ಯಮನ ಪಾದ ಸೇರಿದ ಘಟನೆ ಜರುಗಿದ್ದು, ಘಟನೆಯಲ್ಲಿ ರಾಯಚೂರು ಮೂಲದ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ಹೌದು ರಾಯಚೂರಿನಿಂದ ಬೆಂಗಳೂರಿಗೆ ಗೂಳೆ ಹೋಗುತ್ತಿದ್ದ ಕಾರ್ಮಿಕರು ಇದ್ದ ಕ್ರೂಷರ್ ವಾಹನ ಸಿರಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದ ಭೀಕರ ಅಪಘಾತ ಜರುಗಿದೆ. ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ರಸ್ತೆಬದಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಡೆದಿದೆ ಎನ್ನಲಾಗುತ್ತಿದ್ದು, ಅಪಘಾತದಲ್ಲಿ ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಗೋಲದಿನ್ನಿ ಗ್ರಾಮದ ಬಸವರಾಜ್ (30) ಮತ್ತು ಹಿರೇಬಾದರದಿನ್ನಿಯ ಸುರೇಶ್ (32) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನಂದ ಮತ್ತು ಮತ್ತೊಬ್ಬ ಸುರೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕ್ರುಷರ್ ಚಾಲನೆ ಮಾಡುತ್ತಿದ್ದ ಚಾಲಕ ಬಸವರಾಜ್ ನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದ್ದು, ಗಾಯಾಳುಗಳನ್ನು ಸಿರಾ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ ನಾಲ್ವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸಿರಾ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.