ಮಾಜಿ ಪ್ರಧಾನಿ ನಿಧನ : ರಾಜ್ಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ.

K 2 Kannada News
ಮಾಜಿ ಪ್ರಧಾನಿ ನಿಧನ : ರಾಜ್ಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ.
Oplus_131072
WhatsApp Group Join Now
Telegram Group Join Now

K2kannadanews.in

Sad News ನ್ಯೂಸ್ ಡೆಸ್ಕ್ : ಪ್ರಧಾನಿ ಮನಮೋಹನ್ ಸಿಂಗ್ (Farmer PM Manmohan Singh) ಕೊನೆಯುಸಿರೆಳೆದ ಹಿನ್ನಲೆ ಇಂದು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಾಜ್ಯ ಸರಕಾರ ರಜೆ ಘೋಷಣೆ ಮಾಡಿದಡ.

 

ಹೌದು 92ನೇ ವಯಸ್ಸಿನಲ್ಲಿ ಮನಮೋಹನ್‌ ಸಿಂಗ್‌ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ದೆಹಲಿ ಏಮ್ಸ್‌ (Delhi Aims) ಆಸ್ಪತ್ರೆಗೆ ಮನಮೋಹನ್‌ ಸಿಂಗ್‌ ಅವರನ್ನು ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮನಮೋಹನ್‌ ಸಿಂಗ್‌ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ಸೇರಿಸುವಾಗಲೇ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮನಮೋಹನ ಸಿಂಗ್ ಅವರ ನಿಧನದ ಹಿನ್ನಲೆ ಅವರ ಗೌರವಾರ್ಥವಾಗಿ ರಾಜ್ಯದಲ್ಲಿ, ಈ ಹಿನ್ನಲೆ ಕರ್ನಾಟಕ ರಾಜ್ಯಾದ್ಯಂತೆ ಸರ್ಕಾರಿ ರಜೆ (Government Holiday) ಘೋಷಣೆ ಮಾಡಲಾಗಿದೆ. ಅಲ್ಲದೇ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ (School-College Holiday ಇರಲಿದೆ. ಮತ್ತು 7 ದಿನಗಳ ಶೋಕಾಚರಣೆ ಘೋಷಣೆ ಮಾಡಿದೆ.

Farmer PM Live link

https://www.facebook.com/share/v/15dG1tCx9N/

ಅಲ್ಲದೇ ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ಈಗಾಗಲೇ ಒಂದು ವಾರ ಗಳ ಕಾಲ ರದ್ದು ಮಾಡೋದಾಗಿ ಡಿಸಿಎಂ ಡಿಕೆ ಶಿವಕುಮಾರ್‌ ಅವರು ತಿಳಿಸಿದ್ದಾರೆ. ಇದರ ನಡುವೆ ಮನಮೋಹನ್ ಸಿಂಗ್ ಅವರ ನಿಧನ ಹಿನ್ನಲೆ ನಾಳೆ ಬೆಳಗಾವಿಯಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ರದ್ದು ಮಾಡಲಾಗಿದೆ.

WhatsApp Group Join Now
Telegram Group Join Now
Share This Article