67 ಪ್ರಯಾಣಿಕರಿದ್ದ ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಪತನ..

K 2 Kannada News
67 ಪ್ರಯಾಣಿಕರಿದ್ದ ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಪತನ..
WhatsApp Group Join Now
Telegram Group Join Now

K2kannadanews.in
plane crashes ನ್ಯೂಸ್ ಡೆಸ್ಕ್ :  ಕಜಕಿಸ್ತಾನದ ಅಕ್ಟೌ ನಗರದ ಬಳಿ ಬುಧವಾರ ಅಜೆರ್ಬೈಜಾನ್ ಏರ್ಲೈನ್ಸ್ ಅಪಘಾತದಲ್ಲಿ ಕನಿಷ್ಠ 25 ಜನರು ಬದುಕುಳಿದಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ. ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ವಿಮಾನ ಅಪಘಾತದಲ್ಲಿ 42 ಜನರು ಸಾವನ್ನಪ್ಪಿದ್ದಾರೆ.

ಹೌದು ಅಜರ್‌ಬೈಜಾನ್ ದೇಶದ ಎಂಬರರ್‌ ಸಂಸ್ಥೆಗೆ ಸೇರಿದ 8243 ಸಂಖ್ಯೆಯ ವಿಮಾನ ಸಿಬ್ಬಂದಿ ಒಳಗೊಂಡರೆ 72 ಮಂದಿಯನ್ನು ಬಕುನಿಂದ ರಷ್ಯಾದ ಬ್ರೌನ್‌ಜಿಲ್‌ಗೆ ಕರೆದೊಯ್ಯುತ್ತಿತ್ತು. ವ್ಯಾಪಕ ಮಂಜು ಮುಸುಕಿನ ವಾತಾವರಣದಿಂದಾಗಿ ವಿಮಾನದ ಮಾರ್ಗ ಬದಲಾವಣೆ ಮಾಡಿದ್ದಾಗಿ ಮೂಲಗಳು ತಿಳಿಸಿವೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಜರ್‌ಬೈಜಾನ್ ದೇಶದ ಅಧ್ಯಕ್ಷ ಯೂವಾಮ್‌ ಅಲಿಯೇಒ ಅವರು ರಷ್ಯಾದ ಸಿಐಎಸ್‌‍ ಶೃಂಗದಿಂದ ಅರ್ಧಕ್ಕೆ ಹೊರನಡೆದಿದ್ದು, ಸ್ವದೇಶಕ್ಕೆ ಮರಳಿದ್ದಾರೆ.

ಅಕ್ಟೌ ನಗರದ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದ ಕಾರಣಕ್ಕಾಗಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿಸುವ ವೇಳೆ ನೆಲಕ್ಕಪ್ಪಳಿಸಿದ್ದು, ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ವಿಮಾನ ಎರಡು ಭಾಗಗಳಾಗಿ ತುಂಡಾಗಿದ್ದು, ಒಂದು ಇಂಜಿನ್‌ ಭಾಗದಲ್ಲಿ ಬೆಂಕಿ ಉರಿಯುತ್ತಿದೆ. ಪ್ರಯಾಣಿಕರ ಭಾಗ ನೆಲಕ್ಕಪ್ಪಳಿಸಿದ್ದರಿಂದ ಅಪಘಾತದ ತೀವ್ರತೆ ಹೆಚ್ಚಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article