K2kannadanews.in
Crime News ರಾಯಚೂರು : ಮರ್ಚೇಡದ ಕ್ರಾಸ್ ಬಳಿ ಕಾರು ಚಾಲಕನ ನಿರ್ಲಕ್ಷದ ಚಾಲನೆಯಿಂದ ಕಾರು ಮತ್ತು ಆಟೋ ನಡುವೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ.
ರಾಯಚೂರ ತಾಲೂಕಿನ ಮರ್ಚೆಡ್ ಗ್ರಾಮದ ಕ್ರಾಸ್ ಬಳಿ ಕಳೆದ ರಾತ್ರಿ ಅಪಘಾತ ಜರುಗಿತ್ತು. ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಓರ್ವ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದು, ಕೋಮಾ ಸ್ಥಿತಿಗೆ ಹೋಗಿದ್ದ ಗಾಯಾಳು ಮಧುಸೂದನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಇನ್ನೂ ಬೀರಲಿಂಗಪ್ಪ ಎಂಬುವವರ ಕಾಲು ಮುರಿದಿದ್ದು ಬಳ್ಳಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.
ಅಪಘಾತದಲ್ಲಿ ನಾಗಮ್ಮ, ಬಸಮ್ಮ, ಉಮಾದೇವಿ, ಸುರೇಶ್ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದರು. ಚಾಲಕನ ನಿರ್ಲಕ್ಷದ ಚಾಲನೆಯಿಂದ ಈ ಒಂದು ಅವಘಡ ಜರುಗಿದೆ ಎಂದು ಹೇಳಲಾಗುತ್ತಿದೆ.