K2kannadanews.in
Accident News ಸಿಂಧನೂರು : ರಸ್ತೆ ಬದಿ ಟೀ ಕುಡಿಯುತ್ತಾ ನಿಂತಿದ್ದ ನಿರಾವರಿ ಇಲಾಖೆಯ ಮೂರು ಸಿಬ್ಬಂದಿಗಳ ಮೇಲೆ ಒಟ್ಟಿನ ಮೂಟೆ ತುಂಬಿಕೊಂಡು ಹೋಗುತ್ತಿದ್ದ ಲಾರಿ ಉರುಳಿ ಬಿದ್ದ ಕಾರಣ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ಹೊರವಲಯದ ಡಾಲರ್ಸ್ ಕಾಲೋನಿ ಬಳಿ ಘಟನೆ ನಡೆದಿದ್ದು, ಅತೀ ವೇಗವಾಗಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಉರುಳಿ ಬಿದ್ದಿದೆ. ಒಟ್ಟು ತುಂಬಿಕೊಂಡು ರಾಯಚೂರಿನಿಂದ ಸಿಂಧನೂರು ಕಡೆಗೆ ಹೊರಟಿದ್ದ ಲಾರಿ, ತಡರಾತ್ರಿ 12 ಗಂಟೆ ಸುಮಾರಿಗೆ ರಸ್ತೆ ಬದಿ ಟೀ ಕುಡಿಯಲು ನಿಂತಿದ್ದ ಮೂವರು ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ..
ಮೃತಪಟ್ಟ ಮೂರು ಜನ ನೀರಾವರಿ ಇಲಾಖೆ ಜವಳಗೇರಾ ಉಪವಿಭಾಗದ ಇಬ್ಬರು ಕಿರಿಯ ಇಂಜಿನಿಯರ್ ಗಳು ಮತ್ತು ಓರ್ವ ಕಂಪ್ಯೂಟರ್ ಆಪರೇಟರ್ ಮೃತಪಟ್ಟಿದ್ದಾರೆ. ಸಿಂಧನೂರು ತಾಲ್ಲೂಕಿನ ರಾಂಪೂರ ಗ್ರಾಮದ ಶಿವರಾಜ್ ಕುಮಾರ್ (28).ಸಿಂಧನೂರು ನಗರದ ಮಹೆಬೂಬ್ ಸಾಬ್ (30), ಲಿಂಗಸುಗೂರಿನ ಸರ್ಜಾಪುರ ಗ್ರಾಮದ ಮಲ್ಲಿಕಾರ್ಜುನ್ (35) ಸ್ಥಳದಲ್ಲೆ ಮೃತಪಟ್ಟ ದುರ್ದೈವಿಗಳು. ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಡಲಾಗಿತ್ತು. ಈ ವೇಳೆ ನೀರಿನ ಗೇಜ್ ಪರಿಶೀಲನೆ ಮಾಡಿ ವಾಪಸ್ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಮೃತಪಟ್ಟ ಮೂವರು ನಿರಾವರಿ ಇಲಾಖೆ ಸಿಬ್ಬಂದಿಗಳು ಎಂದು ಗುರುತಿಸಲಾಗಿದೆ. ಮೂರು ಶವಗಳನ್ನು ಸಿಂಧನೂರು ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.