K2kannadanews.in
Crime news ರಾಯಚೂರು : ನಗರದ ಜಿಲ್ಲಾ ಕ್ರೀಡಾಂಗಣದ ಹಿಂಬದಿಯ ರೈಲ್ವೆ ಟ್ರ್ಯಾಕ್ ಪಕ್ಕದ ರಸ್ತೆಯಲ್ಲಿ, ಯುವಕನೋರ್ವ ಕಾಲೇಜು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿ, ಧರ್ಮದೇಟು ತಿಂದ ಘಟನೆ ಎಂದು ನಡೆದಿದೆ.
ಹೌದು ರಾಯಚೂರು ನಗರ ಜಿಲ್ಲಾ ಕ್ರೀಡಾಂಗಣದ ಹಿಂಭಾಗದಲ್ಲಿ ಇರುವಂತಹ ರೈಲ್ವೆ ಟ್ರ್ಯಾಕ್ ಪಕ್ಕದ ರಸ್ತೆಯಲ್ಲಿ ಘಟನೆ. ಅಕ್ಬರ್ ಎನ್ನುವ ಯುವಕ ವಿಕೃತಿ ಮೆರೆದಿದ್ದು ಎಂದು ಗುರುತಿಸಲಾಗಿದೆ. ಅಕ್ಬರ್ ರಾಯಚೂರು ನಗರದ ಪಟರಿಗಳ ಬಳಿಯ ರಸ್ತೆಯಲ್ಲಿ ಕಾಲೇಜು ವಿದ್ಉರ್ಥಿನಿಯರನ್ನು ಗುರಿಯಾಗಿಟ್ಟುಕೊಂಡು ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದನು ಎಂದು ಆರೋಪಿಸಲಾಗುತ್ತಿದೆ.
ನಂತರ ಯಾರು ಇಲ್ಲದ ಸ್ಥಳದಲ್ಲಿ ಅವರ ಮುಂದೆ ನಿಂತು ಅಸಂಭ್ಯವಾಗಿ ಗುಪ್ತಾಂಗವನ್ನು ತೋರಿಸುತ್ತಿದ್ದನು. ವಿಕೃತ ಕಾಮಿ ಈ ಅಸಹ್ಯದ ಕೆಲಸವನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಿತ್ಯ ಇದೇ ರೀತಿಯಾಗಿ ಮಾಡುತ್ತಿದ್ದ, ಅಕ್ಬರ್ನನ್ನು ಸ್ಥಳೀಯರು ಹಿಡಿದು ಥಳಿಸಿ ಧರ್ಮದೇಟು ನೀಡಿದ ವಿಡಿಯೋ ವೈರಲ್ ಆಗಿದೆ.