K2kannadanews.in
storm plane ನ್ಯೂಸ್ ಡೆಸ್ಕ್ : ಲ್ಯಾಂಡ ಆಗಬೇಕಿದ್ದ ವಿಮಾನವೊಂದು ಫಂಗಲ್ ಚಂಡಮಾರುತದ ಗಾಳಿಯ ಹೊಡೆತಕ್ಕೆ ಲ್ಯಾಂಡ್ ಮಾಡಲು ಆಗದೆ ಮತ್ತೆ ಆಕಾಶಕ್ಕೆ ಹಾರಿದ ಘಟನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಹೌದು ಚೆನೈ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಇಂಡಿಗೋ ಏರ್‌ಲೈನ್ಸ್‌ನ, ಏರ್‌ಬಸ್ A320 ನಿಯೋ ವಿಮಾನ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಲ್ಯಾಂಡ್ ಆಗಲು ಪರದಾಡುವಂತಾಯಿತು. ಇನ್ನೇನು ಲ್ಯಾಂಡ್ ಆಗಬೇಕು ಅನ್ನುವಷ್ಟರಲ್ಲಿ ಗಾಳಿಯ ಹೊಡೆತಕ್ಕೆ ಹೆಣಗಾಡುವಂತಾಗಿದೆ, ಬಳಿಕ ಮತ್ತೆ ಆಕಾಶಕ್ಕೆ ಹಾರಿದ ವಿಮಾನ ಕೆಲ ಸಮಯಗಳ ಬಳಿಕ ವಾತಾವರಣ ತಿಳಿಗೊಂಡ ಬಳಿಕ ಲ್ಯಾಂಡ್ ಆಗಿದೆ. ಈ ಒಂದು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವಿಮಾನ ಲ್ಯಾಂಡ್ ಆಗುವ ಕೊನೆ ಕ್ಷಣ ವಿಡಿಯೋ ವೈರಲ್ ಆಗುತ್ತಿದ್ದು ನೋಡುಗರನ್ನೇ ಭಯಹುಟ್ಟಿಸುವಂತಿದೆ.