ಮಂತ್ರಾಲಯ ಮಠಕ್ಕೆ ಜಾಗ ಕೊಟ್ಟಿದ್ದು ಆದೋನಿ ನವಾಬರು..

K 2 Kannada News
ಮಂತ್ರಾಲಯ ಮಠಕ್ಕೆ ಜಾಗ ಕೊಟ್ಟಿದ್ದು ಆದೋನಿ ನವಾಬರು..
WhatsApp Group Join Now
Telegram Group Join Now

K2kannadanews.in

Mantralaya ರಾಯಚೂರು : ಮಂತ್ರಾಲಯ ಮಠಕ್ಕೆ (Mantralaya) ಜಾಗವನ್ನು ಕೊಟ್ಟಿದ್ದು ಆದೋನಿ ನವಾಬರು ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ ಮಾಜಿ ಸಚಿವ ಸಿಎಂ ಇಬ್ರಾಹಿಂ (Ex Minister CM Ibrahim).

ಹೌದು ರಾಯಚೂರಿನಲ್ಲಿ ಮಾಧ್ಯಮದೊಂದಿಗೆ ವಕ್ಫ್ ವಿಚಾರವಾಗಿ ಮಾತನಾಡಿದ ಸಿಎಂ ಇಬ್ರಾಹಿಂ ಅವರು, ಈಗ ರಾಜ್ಯಾದ್ಯಂತ ವಕ್ಫ್ ಚರ್ಚೆ ಆಗುತ್ತಿದೆ, ಮಂತ್ರಾಲಯ ಮಠಕ್ಕೂ ಹಿಂದೆ ಜಾಗ ಕೊಟ್ಟಿದ್ದು ಆದೋನಿ ನವಾಬರು. ಅದನ್ನು ವಕ್ಫ್ ಬೋರ್ಡ್‌ದು ಅಂತಾ ಯಾರದ್ರೂ ಕೇಳಲು ಹೋಗಿದ್ರಾ? ಎಂದು ಪ್ರಶ್ನಿಸಿದ್ದರು. ಹಿಂದೆ ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ಬಂದಾಗ, ನಮ್ಮ ಬೃಂದಾವನ ಇಲ್ಲಿ ಮಾಡುತ್ತೇವೆ ಎಂದಾಗ ಮಂತ್ರಾಲಯ ಖಾಜಿಗೆ ಕೊಟ್ಟ ಜಾಗ ಕ್ಯಾನ್ಸಲ್ ಮಾಡಿದ ಆದೋನಿ ನವಾಬರು ಮಂತ್ರಾಲಯ ಸ್ವಾಮೀಜಿಗೆ ಕೊಟ್ಟರು. ಈ ಕಥೆಯನ್ನು ಮಂತ್ರಾಲಯ ಸ್ವಾಮೀಜಿಗಳು ಹೇಳುತ್ತಾರೆ.

ಅದೂ ಅಲ್ಲದೇ ಶೃಂಗೇರಿ ಶಾರದಾ ಪೀಠದ ಮೇಲೆ ಪೇಶಾವರು ದಾಳಿ ಮಾಡಿದಾಗ, ಟಿಪ್ಪು ಸುಲ್ತಾನ್ ಸೈನ್ಯ ಕಳುಹಿಸಿ ಮತ್ತೆ ಶಾರದಾ ಪೀಠವನ್ನು ಸ್ಥಾಪನೆ ಮಾಡಿದ್ರು ಇದು ಇತಿಹಾಸ, ಇದು ನಮ್ಮ ‌ಪರಂಪರೆ, ಇದು ನಮ್ಮ ಸಂಸ್ಕೃತಿ. ಈ ಚಿಲ್ಲರೇ ಮುಂಡೆದವೂ ರಾಜಕಾರಣಕ್ಕೆ ಬಂದು, ಈ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದ ಸಿಎಂ ಇಬ್ರಾಹಿಂ ಬೇಸರ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Share This Article