K2kannadanews.in
Assaulted ಸಿಂಧನೂರು : ದ್ವಿಚಕ್ರವಾಹನಕ್ಕಾಗಿ (Bike lone) ಲೋನ್ ಪಡೆದ ಯುವಕನ (Young man) ಬಳಿ ರಿಕವರಿಗೆ ಹೋದ ಖಾಸಗಿ ಲೋನ್ ಕಂಪನಿ (Lone company) ರಿಕವರಿ ಸಿಬ್ಬಂದಿಗಳು ಹಲ್ಲೆ ಮಾಡಿ (attacke) ದೌರ್ಜನ್ಯ ಮಾಡಿದ ಘಟನೆ ಸಿಂಧನೂರಿನಲ್ಲಿ ಜರುಗಿದೆ.
ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ (Pwd camp) ಖಾಸಗಿ ಫೈನಾನ್ಸ್ ಕಂಪನಿಯಿಂದ ಮೈಬೂಬ್ ಎಂಬುವರು ಲೋನ್ (Lone) ಪಡೆದುಕೊಂಡಿದ್ದರು 50,000 ಲೋನ್ ಪಡೆದುಕೊಂಡು 42 ಕಂತುಗಳಲ್ಲಿ ಕೇವಲ ಏಳು ಕಂತುಗಳನ್ನು ಉಳಿದಿದ್ದವು. ಇಂದು ಫೈನಾನ್ಸ್ ಸಿಬ್ಬಂದಿಗಳು ಮೈಬೂಬ್ ಅವರಿಗೆ ಲೋನ್ ಪಡೆದುಕೊಂಡು ಯಾಕೆ ಕಟ್ಟಿಲ್ಲ ಎಂದು ಕೇಳಿದ್ದಾರೆ. ಆಗ ಫಲಾನುಭವಿ ಒಂದು ಗಂಟೆಗಳ ನಂತರ ಹಣವನ್ನು ಕೊಟ್ಟುತ್ತೇನೆ ಎಂದು ಹೇಳಿದ್ದಾನೆ. ಈ ವೇಳೆ ಒಪ್ಪದ ಸಿಬ್ಬಂದಿಗಳು ಕೂಡಲೆ ಕಟ್ಟುವಂತೆ ಪಟ್ಟು ಹಿಡಿದಿದ್ದಾರೆ. ಆಗ ಫಲಾನುಭವಿ ಮತ್ತು ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸಿಬ್ಬಂದಿಗಳು ಏಕೈಕ ಹಲ್ಲೇ ಮಾಡಿದ್ದಾರೆ.
ಈ ವೇಳೆ ಅಲ್ಲೆ ಇದ್ದ ಸಾರ್ವಜನಿಕರು ಯುವಕನನ್ನು ಬಿಡಿಸಿಕೊಂಡಿದ್ದಾರೆ. ನಂತರ ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳಿಯರಿಂದ ಮಾಹಿತಿ ಪಡೆದು, ಫೈನಾನ್ಸ್ ಕಂಪನಿ ಮ್ಯಾನೇಜರ್ ನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಹಲ್ಲೆಗೊಳಗಾದ ಮೈಬೂಬ್ ನನ್ನು ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿದೆ.