K2kannadanews.in
Crime News ರಾಯಚೂರು : ಭೀಮನ ಹೆಸರಿನಲ್ಲಿ ಮಡಿಕೆಗಳನ್ನು ಇಟ್ಟು ಪೂಜೆ ಮಾಡಿ ಅದರಲ್ಲಿ ಸೇಂದಿ, ಸಿ ಹೆಚ್ ಪೌಡರ್ ಇಟ್ಟು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಸೇಂದಿ ವಶಪಡಿಸಿಕೊಂಡ ಅಬಕಾರಿ ಮತ್ತು ಪೊಲೀಸ್ ಇಲಾಖೆ.
ರಾಯಚೂರು ನಗರದ ಗದ್ವಾಲ್ ರಸ್ತೆಯಲ್ಲಿನ ಕೊರಬರ ಕೋಣೆಯಲ್ಲಿ ಇರುವಂತಹ ಗಂಜಿ ವೀರೇಶ್ ಎಂಬುವರ ಮನೆ ಮೇಲೆ, ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ಮಾಡಿ, 450 ಲೀಟರ್ ಕಲಬೆರಕೆ ಸೆಂದಿ, 500 ಗ್ರಾಂ ಸಿಎಚ್ ಪೌಡರ್, 100 ಗ್ರಾಂ ಸಕ್ರೀನ್ ಪಶುಪಡಿಸಿಕೊಳ್ಳಲಾಗಿದೆ. ತಾಳಿ ವೇಳೆ ಯಾರಿಗೂ ಅನುಮಾನ ಬರಬಾರದು ಎಂದು ಮನೆಯಲ್ಲಿ ಮಡಿಕೆಗಳನ್ನ ಇಟ್ಟು ಅದಕ್ಕೆ ಪೂಜೆ ಸಲ್ಲಿಸಿ, ಅದರ ಒಳಗೆ ಕಲಬೆರಕೆ ಸೇಂದಿ ಮತ್ತು ಸಿಎಚ್ ಪೌಡರ್ ಸೇರಿದಂತೆ ಮಧ್ಯದ ಪಾಕೆಟ್ ಗಳನ್ನ ಇರಿಸಿ ಮಾರಾಟ ಮಾಡಲಾಗುತ್ತಿತ್ತು.
ಕಲಬೆರಕೆ ಸೆಂದಿ ತಯಾರಿಕೆಗೆ ಬಳಸುವ ರಾಸಾಯನಿಕಗಳ ಜಪ್ತಿ ಮಾಡಿಕೊಂಡಿರುವ ಅಧಿಕಾರಿಗಳು, ಗಜ್ಜಿ ವಿರೇಶ್ , ಉರುಕುಂದಮ್ಮ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಈಗಾಗಲೇ ಸುಮಾರು ಹಲವು ಪ್ರಕರಣಗಳನ್ನು ಗಜ್ಜಿ ವಿರೇಶ್ ಮತ್ತು ಪತ್ನಿ ಹೆಸರಿನಲ್ಲಿದ್ದರೂ, ಸಿ ಎಚ್ ಪೌಡರ್ ಸಂಗ್ರಹ, ಕಲಬೆರಕೆ ಸೆಂದಿ ತಯಾರಿಕೆ, ಮಾರಾಟ ಮಾಡುತ್ತಿದ್ದಾರೆ. ಪ್ರಸ್ತುತ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.