K2kannadanews.in
Crime news ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿ ಸಾಕಷ್ಟು ಪ್ರಕರಣಗಳಲ್ಲಿ ಹಲವರಿಗೆ ಕುತ್ತಾಗಿದ್ದು, ಪಟಾಕಿ ಸಿಡಿಸುವ ವೇಳೆ ಸ್ನೇಹಿತರ ಹುಚ್ಚಾಟಕ್ಕೆ ಯುವಕನೋರ್ವ ಬಲಿಯಾದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಕೋಣನಕುಂಟೆ ಠಾಣಾ ವ್ಯಾಪ್ತಿಯ ವೀವರ್ಸ್ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಹಬ್ಬದ ದಿನ ರಾತ್ರಿ ಕುಡಿದ ಅಮಲಿನಲ್ಲಿ ಯುವಕರು ಮೃತ ಶಬರೀಶ್ನನ್ನು ಪಟಾಕಿ ಅಂಟಿಸಿದ್ದ ಡಬ್ಬಿಯ ಮೇಲೆ ಕುಳಿತುಕೊಳ್ಳಲು ಚಾಲೆಂಜ್ ಮಾಡಿದ್ದರು. ಈ ವೇಳೆ ಪಟಾಕಿ ಸಿಡಿದು ಶಬರೀಶ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ದುರದೃಷ್ಟವಶಾತ್ ಶಬರೀಶ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಅಸುನೀಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವಕನನ್ನು ಶಬರೀಶ್ ಎಂದು ಗುರುತಿಸಲಾಗಿದ್ದು, ಶಬರೀಶ್ಗೆ ಗಂಭೀರವಾಗಿ ಗಾಯಗೊಳ್ಳಲು ಕಾರಣರಾಗಿದ್ದ 6 ಜನ ಯುವಕರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.