K2kannadanews.in
Ramayana ನ್ಯೂಸ್ ಡೆಸ್ಕ್ : ರಾಮಾಯಣ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅಲ್ಲಿ ಕುಂಭಕರ್ಣ ಕೂಡ ಎಲ್ಲರಿಗೂ ಗೊತ್ತು. ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಕುಂಭಕರ್ಣನ ಖಡ್ಗವೊಂದು ಪುರಾತತ್ವ ಶೋಧನೆಯಲ್ಲಿ ದೊರೆತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋಗಳು ಹರಿದಾಡುತ್ತಿವೆ.
ಸಾಮಾಜಿಕ ಜಾಲತಾಣದ ವೇದಿಕೆಯಾದ ಎಕ್ಸ್ ನಲ್ಲಿ ಹಾಕಲಾದ ವೀಡಿಯೋದಲ್ಲಿ, ಕುಂಭಕರ್ಣನ ಖಡ್ಗ ಪತ್ತೆಯಾಗಿದೆ, ರಾಮಾಯಣ ನಡೆದಿದೆ ಎಂಬುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ ಎಂದು ಹೇಳಾಗುತ್ತಿದೆ. ಇದೇ ರೀತಿಯ ಪೋಸ್ಟ್ ಫೇಸ್ ಬುಕ್ ನಲ್ಲಿಯೂ ಕಂಡುಬಂದಿದೆ. ಆದರೆ ಇದು ವಾಸ್ತವಕ್ಕೆ ಶ್ರೀಲಂಕಾದಲ್ಲಿ ಸಿಕ್ಕ ಖಡ್ಗವಲ್ಲ ಎಂಬುದು ಕೆಲವರ ವಾದವಾಗಿದೆ. ಇದರ ಫ್ಯಾಕ್ಟ್ ಚೆಕ್ ಕೂಡ ಮಾಡಲಾಗಿದ್ದು, ಮೇ 9, 2024ರ ಜಪಾನ್ ಟೈಮ್ಸ್ ವರದಿಯೊಂದರಲ್ಲಿ ಜಪಾನ್ ನಿನ ನರಾ ಎಂಬಲ್ಲಿ ಟೊಮಿಯೊ ಮರಿಯಾಮಾ ಸಮಾಧಿಯಲ್ಲಿ 2022ರಲ್ಲಿ ಅತಿ ದೊಡ್ಡ ಖಡ್ಗವೊಂದು ಪತ್ತೆಯಾಗಿತ್ತು, ಇದು ನಾಲ್ಕನೇ ಶತಮಾನದ್ದಾಗಿದೆ ಎಂದು ಹೇಳಲಾಗಿದೆ.
ಅದೇ ಒಂದು ಖಡ್ಗವನ್ನು ಈ ಸುದ್ದಿಯಲ್ಲಿ ಕುಂಭಕರ್ಣನ ಖಡ್ಗ ಎಂಬ ಬಗ್ಗೆ ಬಿಂಬಿಸಲಾಗಿದೆ. ಆದರೇ ಯಾವುದೇ ಉಲ್ಲೇಖಗಳು ಒದುವರೆಗೂ ಕಂಡುಬಂದಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೇ ವೈರಲ್ ಆಗಿರುವ ಪೋಟೊಗಳನ್ನು ಪರಿಶೀಲಿಸಿ ನೋಡಲಾಗಿದೆಯಂತೆ, ಅದರಲ್ಲಿ ಕಾಣುವ ವ್ಯಕ್ತಿಗಳ ಮುಖವು ಅಸ್ಪಷ್ಟವಾಗಿರುವುದನ್ನು ಗುರುತಿಸಿದ್ದುಈ ಹಿನ್ನೆಲೆಯಲ್ಲಿ ಫೋಟೋಗಳ ಸತ್ಯಾಸತ್ಯತೆ ತಿಳಿಯಲು ಮುಂದಾದಾಗ ಇದರ ನಿಜೆ ಸಂಗತಿ ತಿಳಿದಿದೆ.