K2kannadanews.in
Shop fire ಹೈದರಾಬಾದ್ : ದೀಪಾವಳಿಗಾಗಿ ಮಾರಾಟ ಮಾಡಲು ಹೆಚ್ಚಿನ ರೀತಿಯಲ್ಲಿ ಸ್ಟಾಕ್ ಇಟ್ಟಿದ್ದ ಪಟಾಕಿ ತುಂಬಿದ ಗೋಡೌನ್ ಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಸಾಮಗ್ರಿಗಳು ಸುಟ್ಟು ಭಸ್ಮವಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೌದು ಹೈದರಾಬಾದ್ ನ ಹನುಮಾನ್ ತೆಕಡಿಯ ಪ್ರಗತಿ ಮಹಾ ವಿದ್ಯಾಲಯದ ಬಳಿಯ ಭಾನುವಾರ ತಡರಾತ್ರಿ ನಡೆದಿದೆ. ದೀಪಾವಳಿಯ ಹಿನ್ನಲೆ ಕೆಲಸ ಹೆಚ್ಚಿದ್ದ ಕಾರಣ ತಡರಾತ್ರಿಯವರೆಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ದಿಢೀರ್ ಬೆಂಕಿ ಹತ್ತಿಕೊಂಡ ವೇಳೆ ವ್ಯಾಪಾರಕ್ಕೆ ಬಂದಿದ್ದ ಜನ ಮತ್ತು ಕಾರ್ಮಿಕರು ಗಾಬರಿಗೊಂಡು ಕೂಡಲು ಯತ್ನಿಸಿದ್ದಾರೆ. ಈ ವೆಳೆ ಕಾಲ್ತುಳಿತ ಉಂಟಾಗಿ ಇಬ್ಬರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಗ್ನಿದ್ರು ಅಂತದಲ್ಲಿ ಹೇಳು ಕಾರುಗಳು ಸುಟ್ಟು ಭಸ್ಮವಾಗಿವೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸುಲ್ತಾನ್ ಬಜಾರ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಘಟನೆ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ಕಮಿಷನರ್, ಭಾನುವಾರ ರಾತ್ರಿ ಅಗ್ನಿ ಜರುಗಿದ ದುರಂತದಲ್ಲಿ ಹಲವಾರು ಜನರಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿದ್ದು, ಬೆಂಕಿ ಹೊತ್ತಿಕೊಂಡ ಕೆಲವೇ ಕೆಲವು ನಿಮಿಷಗಳಲ್ಲಿ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಈ ಘಟನೆಯಲ್ಲಿ 7 ಕ್ಕೂ ಹೆಚ್ಚು ಕಾರು ಸುಟ್ಟು ಹೋಗಿದೆ ಎಂದಿದ್ದಾರೆ.