K2kannadanews.in
Live worms ಜಮಖಂಡಿ : ಪ್ರತಿಷ್ಠಿತ
ಎಂಟಿಆರ್ ಕಾರದ ಪುಡಿ ಪಾಕೆಟ್ ನಲ್ಲಿ ಜೀವಂತ ಹುಳುಗಳು ಪತ್ತೆಯಾದ ಘಟನೆ ಜಮಖಂಡಿ ನಗರದಲ್ಲಿ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಅಂಗಡಿಯೊಂದರಲ್ಲಿ ಗ್ರಾಹಕರು ಎಂಟಿಆರ್ ಕಾರದ ಪುಡಿಯ ಪಾಕೇಟ್ ಖರೀದಿಸಿದ್ದಾರೆ. ಅದನ್ನು ಮನೆಗೆ ತಂದು ಒಡೆದು ಅಡುಗೆಗೆ ಬಳಸುವಾಗ ಹುಳುಗಳಿರುವುದು ಬೆಳಕಿಗೆ ಬಂದಿದೆ. ಎಕ್ಸಪೈರ್ ಆಗದ ಎಂಟಿಆರ್ ಪಾಕೆಟ್ ನಲ್ಲಿ ಹುಳುಗಳು ಪತ್ತೆಯಾಗಿದ್ದು ಗ್ರಾಹಕರಲ್ಲಿ ಆತಂಕ ಹೆಚ್ಚಿಸಿದೆ.
ಎಂಟಿಆರ್ ಪಾಕೆಟ್ ಒಳಗೆ ಕಾರದ ಪಾಕೆಟ್ ಒಡೆದು ಪೌಡರ್ ಒಂದು ಪೇಡರ್ ಮೇಲ್ ಹಾಕಿದಾಗ ಹುಳುಗಳು ಹರಿದಾಡ್ತಿರುವ ದೃಶ್ಯ ಕ್ಯಾಮರಾಗಳ ಸೆರೆಯಾಗಿದೆ.