K2kannadanews.in
Liquor Bandh ನ್ಯೂಸ್ ಡೆಸ್ಕ್ : ರಾಜ್ಯಾದ್ಯಂತ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುಲು ಆಗ್ರಹಿಸಿ, ನವೆಂಬರ್ 20ರಂದು ರಾಜ್ಯ ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ವತಿಯಿಂದ ಒಂದು ದಿನ ಮಧ್ಯ ಮಾರಾಟ ಮಾಡಲು ನಿರ್ಧಾರ ಕೈಗೊಂಡಿದೆ.
ರಾಜ್ಯದಲ್ಲಿ ಇಲಾಖೆಯಲ್ಲಿನ ವರ್ಗಾವಣೆ, ಪ್ರಮೋಷನ್ ಗೆ ಲಂಚ ಕೊಡಬೇಕು ಎಂಬ ನೆಪ ಹೇಳಿಕೊಂಡು, ಅಬಕಾರಿ ಅಧಿಕಾರಿಗಳು ಮದ್ಯ ಮಳಿಗೆಗಳ ಮಾಲಿಕರಿಂದ ಮನಸ್ಸೋ ಇಚ್ಛೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ, ಈ ಒಂದು ಲಂಚಗಳಿತನಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ನವೆಂಬರ್ 20ರಂದು ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಲಾಗಿದೆ.
ಅಧಿಕಾರಿಗಳು ಲಂಚಗುಳಿಯಿಂದ ರಾಜ್ಯದಲ್ಲಿ ನಕಲಿ ಅಂತರ ರಾಜ್ಯ ಮದ್ಯ ಮಾರಾಟ ಹೆಚ್ಚಾಗಿ ಇಲಾಖೆಗೆ ಅಬಕಾರಿ ಆದಾಯ ಕುಂಠಿತವಾಗಿದೆ. ಹಾಗಾಗಿ ಅಬಕಾರಿ ಇಲಾಖೆಯನ್ನು ಆರ್ಥಿಕ ಇಲಾಖೆ ಜವಾಬ್ದಾರಿ ಹೊಂದಿರುವ ಸಚಿವರಿಗೆ ವಹಿಸಬೇಕು ಎಂದು ಆಗ್ರಹಿಸಿ ಮದ್ಯ ಮಾರಾಟ ಬಂದ್ ಗೆ ಕರೆ ನೀಡಲಾಗಿದೆ.