K2kannadanews.in
Crime news ಕಾನ್ಪುರ : ಜಿಮ್ ಟ್ರೈನರ್ ಒಬ್ಬ ಅಕ್ರಮ ಸಂಬಂಧ ಹೊಂದಿರುವ ವಿವಾಹಿತ ಮಹಿಳೆಯೊಬ್ಬಳನ್ನು ಕೊಲೆಗೈದು ಜಿಲ್ಲಾಧಿಕಾರಿ ನಿವಾಸದ ಬಳಿ ಹೂತಿದ್ದಾನೆ. ಹೀಗೆ ಮಾಡಲು ದೃಶ್ಯಂ ಸಿನಿಮಾದಿಂದ ಸ್ಫೂರ್ತಿಯಂತೆ.
ಹೌದು ಘಟನೆಯು ಕಾನ್ಪುರದಲ್ಲಿ ನಡೆದಿದ್ದು, ಏಕ್ತಾ ಗುಪ್ತಾ ಕೊಲೆಯಾದ ಮಹಿಳೆಯಾಗಿದ್ದು, ಈಕೆಯ ಜಿಮ್ ತರಬೇತುದಾರ ವಿಶಾಲ್ ಸೋನಿ ಕೊಲೆಯ ಆರೋಪಿ. ಈತ ಮಾಹಿತಿ ಆಧಾರದ ಮೇಲೆ ಕಾನ್ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್(ಡಿಎಂ) ಅವರ ಅಧಿಕೃತ ನಿವಾಸದ ಬಳಿಯ ಕ್ಲಬ್ನಿಂದ ಪೊಲೀಸರು ಶವವನ್ನು ವಶಪಡಿಸಿಕೊಂದಿದ್ದಾರೆ. ಸೋನಿ ಮತ್ತೊಂದು ಹುಡುಗಿಯ ಜೊತೆ ನಿಶ್ಚಿತಾರ್ಥಕ್ಕೆ ಮುಂದಾದಾಗ ಏಕ್ತಾ ಗುಪ್ತಾ ಇದನ್ನು ವಿರೋಧಿಸಿದ್ದಾಳೆ.
ಹೀಗಾಗಿ ಕೋಪಗೊಂಡ ಸೋನಿ ಆಕೆಯನ್ನು ಕೊಂದು ಹೂತುಹಾಕಿದ್ದಾಗಿ ತಿಳಿದುಬಂದಿದೆ. ಸದ್ಯ ಕೊಲೆಯಾಗಿರುವ ಮಹಿಳೆಯ ಪತಿ ರಾಹುಲ್ ಗುಪ್ತಾ ಈ ಹಿಂದೆ ಈ ಇಬ್ಬರ ನಡುವಿನ ಸಂಬಂಧದ ಬಗ್ಗೆ ಕೊಲೆಗಾರ ಸೋನಿ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈ ಹಿಂದೆ ಸೋನಿಯನ್ನು ಬಂಧಿಸಿದ್ದರು. ಪೊಲೀಸರ ಪ್ರಕಾರ, ಸೋನಿ ಮತ್ತು ಏಕ್ತಾ ಅಕ್ರಮ ಸಂಬಂಧದಲ್ಲಿದ್ದರು.