K2kannadanews.in
Accident News ಸಿಂಧನೂರು : ಡಿವೈಡರ್ ನಲ್ಲಿ ರೋಡ್ ಕ್ರಾಸ್ (road cross) ಮಾಡುತ್ತಿದ್ದ ವೇಳೆ ಬೈಕ್ ಗೆ (Bike) ಹಿಂಬದಿಯಿಂದ ಇನ್ನೊಂದು ಬೈಕ್, ಡಿಕ್ಕಿ (collision) ಹೊಡೆದ ಪರಿಣಾಮ ಓರ್ವ ವ್ಯಕ್ತಿ (person) ಸ್ಥಳದಲ್ಲಿ ಮೃತಪಟ್ಟು (Dead) ಇನ್ನೂರ್ವ ವ್ಯಕ್ತಿ ಆಸ್ಪತ್ರೆಯಲ್ಲಿ (Hospital) ಮೃತಪಟ್ಟ ಘಟನೆ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದ ಗಂಗಾವತಿ (Gangavti) ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಈ ಒಂದು ಘಟನೆಯು ಅಕ್ಟೋಬರ್ 11ರಂದು ನಡೆದಿದ್ದು, ಓರ್ವ ದ್ವಿಚಕ್ರ ವಾಹನ ಸವಾರ ರಸ್ತೆ ದಾಟುತ್ತಿದ್ದ ವೇಳೆ, ಹಿಂಬದಿಯಿಂದ ವೇಗವಾಗಿ ಬಂದ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟು. ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದ. ಗಾಯಗೊಂಡ ವ್ಯಕ್ತಿಯನ್ನು ರಾಯಚೂರು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಜಾವಿದ್ ಎನ್ನುವ ವ್ಯಕ್ತಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾನೆ.