K2kannadanews.in
Viral Video ಬೀದರ್ : ಸರಕಾರದ ಗ್ಯಾರೆಂಟಿ ಎಫೆಕ್ಟ್ ಇನ್ನು ತಗ್ಗಿದಂತೆ ಕಾಣುತ್ತಿಲ್ಲ. ಶಕ್ತಿ ಯೋಜನೆಯಿಂದ ಸೀಟಿಗಾಗಿ ಮಹಿಳೆಯರ ಜಗಳ ನಿಂತಂತಿಲ್ಲ. ಸಾರಿಗೆ ಬಸ್ ನಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಒಂದು ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಬೀದರ-ಕಲಬುರಗಿ ಮಾರ್ಗದಲ್ಲಿ ಒಡಾಡುವ ಬಸ್ನಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದೆ. ಶಕ್ತಿ ಯೋಜನೆ ಅಡಿ ಉಚಿತ ಟಿಕೆಟ್ ಪಡೆದ ಬಳಿಕ ಮಹಿಳೆಯರು ಕಿತ್ತಾಟ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು. ವೀಡಿಯೋದಲ್ಲಿ ಕಾಣುವಂತೆ ಆರಂಭದಲ್ಲಿ ಓರ್ವ ಮಹಿಳೆ ಸೀಟು ಬಿಟ್ಟು ಕೊಡು, ನನ್ನ ಸೀಟು ಎಂದು ಹೇಳಿದ್ದಾರೆ, ಇನ್ನೋರ್ವ ಮಹಿಳೆ ನಾನ್ಯಾಕೆ ಸೀಟು ಬಿಡಲಿ, ಏನ್ ಮಾಡ್ತಿಯಾ ಎಂದು ಪರಸ್ಪರ ವಾಗ್ವಾದ ನಡೆಸಿದ್ದಾರೆ. ಈ ಒಂದು ವಾಗ್ವದ ಮಾತಿನ ಚಕಮಕಿ ಮಿತಿಮೀರಿ ಕೈಕೈ ಮಿಲಾಯಿಸಿ ಜಗಳವಾಡುವ ಹಂತಕ್ಕೆ ತಲುಪಿದೆ, ಈ ವೇಳೆ ಓರ್ವ ಮಹಿಳೆ ಚಪ್ಪಲಿಯಿಂದ ಹೊಡೆದಿದ್ದಾಳೆ.
ಇನ್ನೂ ಶಕ್ತಿಯೋಜನೆ ಜಾರಿಗೆ ಬಂದ ನಂತರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ, ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದಾಗಿ ಬಸ್ಗಳಲ್ಲಿ ಮಹಿಳೆಯರ ಸಂಚಾರ ಹೆಚ್ಚಾಗಿದೆ. ಆಗಾಗ ಇಂತಹ ಘಟನೆಗಳು ನಡೆಯುತ್ತಿವೆ. ಆ ವೀಡಿಯೋಗಳು ವೈರಲ್ ಆಗುತ್ತಿವೆ.