K2kannadanews.in
Crime News ಸಿಂಧನೂರು : ಬಂಗಾರದ (Gold) ಆಭರಣ ಕಳ್ಳತನದ (theft) ಪ್ರಕರಣ ಭೇದಿಸಿದ ಪೊಲೀಸರು (Police) ವಿಶೇಷ ಕಾರ್ಯಾಚರಣೆ ನಡೆಸಿ, 2 KG 5 ತೊಲೆ ಬಂಗಾರದ ಆಭರಣಗಳ (Jewelry) ಸಮೇತ ಕಳ್ಳನನ್ನು ಬಂಧಿಸಿದ ಘಟನೆ ಸಿಂಧನೂರುನಲ್ಲಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ (Raichur city police station) ಮಾಧ್ಯಮದೊಂದಿಗೆ ಮಾತನಾಡಿದ ಎಸ್ಪಿ ಪುಟ್ಟಮಾದಯ್ಯ ಅವರು, ಸಿಕಂದರಬಾದ್ ಮೂಲದ ಇಬ್ಬರು ಬಂಗಾರ ವ್ಯಾಪಾರಿಗಳಾದ (gold merchant) ದರಮೇಶ ಕುಮಾರ್ ಹಾಗೂ ನಿರ್ಮಲ್ ಕುಮಾರ ಜೈನ್ ಎನ್ನುವವರು ಕಮಿಷನ್ ಆಧಾರದ ಮೇಲೆ ಬಂಗಾರ ಮಾರಾಟ ಮಾಡಲು ಸಿಕಂದರಬಾದ್ (Sikendrabad) ನ ಬಂಗಾರ ವ್ಯಾಪಾರಿ (gold merchant) ಭರತ್ ಕುಮಾರ್ ಎನ್ನುವವರಿಂದ ಕೋಟ್ಯಾಂತರ ರೂ ಮೌಲ್ಯದ ಬಂಗಾರದ ಆಭರಣಗಳನ್ನು ಅಕ್ಟೋಬರ್ 12 ರಂದು ರಾಯಚೂರು ಜಿಲ್ಲೆಗೆ ತಂದಿದ್ದರು. ಅವರಿಬ್ಬರುವ ಸಿಂಧನೂರು ನಗರದ ಜೈನ್ ಧರ್ಮಶಾಲೆಯ ಕೋಣೆಯೊಂದರಲ್ಲಿ ಬಂಗಾರ ಸಮೇತ ವಾಸ್ತವ್ಯ ಹೂಡಿದ್ದರು. ಮರುದಿನ ಸಿಂಧನೂರಿನ ಹಲವೆಡೆ ಬಂಗಾರ ವ್ಯಾಪಾರ ಮಾಡುವ ಉದ್ದೇಶ ಹೊಂದಿದ್ದರು.
ಈ ವೇಳೆ ಆರೋಪಿ ನಿರ್ಮಲ್ ಕುಮಾರ್ ಜೈನ್ ದರಮೇಶನಿಗೆ ತಿಳಿಯದಂತೆ ಎಲ್ಲಾ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಮಾನ್ವಿ (Manvi) ಪಟ್ಟಣದ ಬಾಲಾಜಿ ಕಂಪರ್ಟ್ಸ್ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದನು. ನಂತರ ಬಂಗಾರದ ಮೂಲ ಮಾಲೀಕ ಭರತ್ ಕುಮಾರ್ ನಿಗೆ ಬಂಗಾರ ಕಳ್ಳತನವಾದ ವಿಷಯ ತಿಳಿದು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಬಹುಕೋಟಿ ಮೌಲ್ಯದ ಬಂಗಾರದ ಕಳ್ಳತನದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯಪ್ರವುತ್ತರಾಗಿ ಪ್ರಕರಣ ಭೇದಿಸಿದ್ದಾರೆ. ಆರೋಪಿಯಿಂದ ಕಳ್ಳತನ ಮಾಡಿದ ಒಟ್ಟು 2 ಕೆಜಿ 5 ತೊಲೆ ಬಂಗಾರದ ಆಭರಣಗಳು ಹಾಗೂ 40,150 ರೂ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಬಂಗಾರದ ಆಭರಣಗಳ ಮೌಲ್ಯ 1 ಕೋಟಿ 43 ಲಕ್ಷದ 92 ಸಾವಿರ ರೂಗಳು ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು.