K2kannadanews.in
Accident News ತೆಲಂಗಾಣ : ಡ್ರೈವಿಂಗ್ ತರಬೇತಿ (Driving training) ಪಡೆಯುವ ಅಭ್ಯರ್ಥಿಯೊಬ್ಬ ಯಡವಟ್ಟು ಮಾಡಿದ್ದು, ತರಬೇತುದಾರನ (trainar) ಸೂಚನೆಗೆ ವಿರುದ್ಧವಾಗಿ ವ್ಯಕ್ತಿ ಬ್ರೇಕ್ (Brack) ಬದಲಿಗೆ ಆಕ್ಸಿಲೇಟರ್ (acclater) ಅನ್ನು ತುಳಿದ ಪರಿಣಾಮ ಕಾರು (car) ಹೊಂಡಕ್ಕೆ ಬಿದ್ದ ಘಟನೆ ಜಂಗಾವ್ ಪ್ರದೇಶದಲ್ಲಿ ನಡೆದಿದೆ.
ತೆಲಂಗಾಣದ (telangan) ಜಂಗಾವ ಎಂಬ ಪ್ರದೇಶದಲ್ಲಿ ಘಟನೆ ನಡೆದಿದ್ದು, ಕಾರು ಡ್ರೈವಿಂಗ್ ಕಲಿಯಲು ಈ ಇಬ್ಬರು ಕೊಳದ ಪಕ್ಕದ ಹೊಲದ ಬಳಿ ಬಂದಿದ್ದಾರೆ. ಗೊಂದಲದಲ್ಲಿ ಅತಿಯಾಗಿ ಆಕ್ಸಿಲೇಟರ್ ತುಳಿದ ಪರಿಣಾಮ ಪಕ್ಕದಲ್ಲೇ ಇದ್ದ ಕೊಳಕ್ಕೆ ಕಾರು ಹಾರಿದೆ. ಹೀಗೆ ಕಾರು ಮುಳುಗಲು ಪ್ರಾರಂಭಿಸಿದ ನಂತರ ಇಬ್ಬರೂ ನೀರಿಗೆ ಹಾರಿದ್ದಾರೆ.
ಆದ್ರೆ ಅಲ್ಲ ದಾರಿಹೋಕ ಅವರಿಗೆ ಕೊಳದಿಂದ ಹೊರಬರಲು ಸಹಾಯ ಮಾಡಿದ್ದಾನೆ. ಇಬ್ಬರಿಗೂ ಈಜುವುದು ಗೊತ್ತಿದ್ದುದರಿಂದ ಮತ್ತು ಕೊಳ ಆಳವಿಲ್ಲದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಈ ಬಗ್ಗೆ ಪೊಲೀಸರು ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಪ್ರಕರಣ ದಾಖಲಿಸಿದ್ದಾರೆ.