K2kannadanews.in
Yuva Dasara ಸಿಂಧನೂರು : ನಗರದಲ್ಲಿ ನಡೆಯುತ್ತಿರುವ 9 ದಿನಗಳ ದಸರಾ, ಕಾರ್ಯಕ್ರಮದ ಅಂಗವಾಗಿ ಇಂದು ವಿಜೃಂಭಣೆಯ ಜಂಬೂಸವಾರಿ ಮೂಲಕ ಸಿದ್ದಿ ಪರ್ವತ ಕ್ಷೇತ್ರ ದೇವತೆ ಅಂಬಾದೇವಿ ಮೂರ್ತಿ ಮೆರವಣಿಗೆ ಮೂಲಕ ವಿದ್ಯುಕ್ತವಾಗಿ ತೆರೆ ಎಳೆಯಲಾಯಿತು.
ರಾಯಚೂರು ಜಿಲ್ಲೆ ಸಿಂಧನೂರು ನಗರದಲ್ಲಿ ಇಂದು ವಿಜಯದಶಮಿ ಅಂಗವಾಗಿ ಜಂಬೂಸವಾರಿ ವಿಜೃಂಭಣೆಯಿಂದ ಮಾಡಲಾಯಿತು. ಸಿದ್ದಿ ಪರ್ವತ ಅಂಬಾದೇವಿಯ ಮೂರ್ತಿಯನ್ನು ಆನೆಯ ಮೇಲೆ ಇಟ್ಟು ಸಿಂಧನೂರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಇನ್ನು ಈ ಒಂದು ಜಂಬೂಸವಾರಿ ವೇಳೆ ವಿವಿಧ ಸ್ಥಬ್ದ ಚಿತ್ರಗಳನ್ನು ಪ್ರದರ್ಶಿಸಲಾಯಿತು, ಮೆರವಣಿಗೆಯುದ್ದಕ್ಕೂ ವಿವಿಧ ಕಲಾತಂಡಗಳು ಭಾಗಿಯಾಗಿ ಮೆರವಣಿಗೆಗೆ ಮೆರಗು ತುಂಬಿದರು.
ಇನ್ನು ಈ ಒಂದು ಕಾರ್ಯಕ್ರಮಕ್ಕೆ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ವಿರುಪಾಕ್ಷಪ್ಪ, ತಹಶೀಲ್ದಾರ್ ಅರುಣ್ ಹೆಚ್ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ್ ಸೇರಿದಂತೆ ಜನಪ್ರತಿನಿಧಿಗಳು ಮುಖಂಡರು ಸರ್ಕಾರಿ ಸಿಬ್ಬಂದಿಗಳು ಪೊಲೀಸ್ ಇಲಾಖೆ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿ ಮಾಡಿದರು ಮತ್ತು ಈ ಒಂದು ಜಂಬೂಸವಾರಿ ಮೂಲಕ ಸಿಂಧನೂರು ದಸರಾ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ತೆರೆ ಎಳೆಯಲಾಯಿತು.