ಬಾವಿಗೆ ಬಿದ್ದ ಕಾರು : ತಾರಿನಲ್ಲಿದ್ದವರು ಪಾರಾಗಿದ್ದೇ ಪವಾಡ..!

K 2 Kannada News
ಬಾವಿಗೆ ಬಿದ್ದ ಕಾರು : ತಾರಿನಲ್ಲಿದ್ದವರು ಪಾರಾಗಿದ್ದೇ ಪವಾಡ..!
WhatsApp Group Join Now
Telegram Group Join Now

K2kannadanews.in

 

Accident News ಕೇರಳ : ರಸ್ತೆಯಲ್ಲಿದ್ದ ಗುಂಡಿಯಿಂದಾಗಿ ಕಾರೊಂದು (Car Accident) ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ (Car fell into well ) ಆಘಾತಕಾರಿ ಘಟನೆ ಕೇರಳ (Kerala ) ದ ಪಾಂಕೋಟ್ ಎಂಬಲ್ಲಿ ನಡೆದಿದೆ.

ಕೇರಳ ರಾಜ್ಯದ ಕೊಳಂಚೇರಿ ಸಮೀಪದ ಪಾಂಕೋಟ್ ಎಂಬಲ್ಲಿ ಘಟನೆ ನಡೆದಿದ್ದು, ದಂಪತಿ (Couple ) ಪ್ರಯಾಣಿಸುತ್ತಿದ್ದ ದಂಪತಿ ಕೊಟ್ಟಾರಕ್ಕರದಿಂದ ಆಲುವಾ ಕಡೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ನಿಯಂತ್ರಣ ತಪ್ಪಿ ಸುಮಾರು 15 ಅಡಿ ಆಳದ ಬಾವಿಗೆ ಬಿದ್ದಿದೆ. ಅದೃಷ್ಟವಶಾತ್​ ದಂಪತಿ ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿದ್ದಾರೆ.

ಕಾರು ಬೀಳುವ ವೇಳೆ ಬಾವಿಯಲ್ಲಿ 5 ಅಡಿ ನೀರು ಇತ್ತು. ಎಂ.ಅನಿಲ್ (27) ಮತ್ತು ವಿಸ್ಮಯ (26) ಅವರನ್ನು ಪಟ್ಟಿಮಠ ಅಗ್ನಿಶಾಮಕ ಠಾಣಾಧಿಕಾರಿ ಎನ್.ಎಚ್.ಅಸೈನರ್ ನೇತೃತ್ವದಲ್ಲಿ ರಕ್ಷಣೆ ಮಾಡಿದ್ದಾರೆ. ಕಾರು ರಸ್ತೆಯಲ್ಲಿನ ಗುಂಡಿಗೆ ಸಿಲುಕಿದಾಗ ನಿಯಂತ್ರಣ ತಪ್ಪಿ ಹೋಯಿತು. ನಂತರ ಬಾವಿಯ ರಕ್ಷಣಾ ಗೋಡೆ ಒಡೆದು ಒಳಗೆ ಬಿದ್ದಿತು ಎಂದು ದಂಪತಿ ಹೇಳಿದ್ದಾರೆ.

ಬಾವಿಯಲ್ಲಿ ನೀರು ಕಡಿಮೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ. ಅಪಘಾತದ ನಂತರವೂ ದಂಪತಿಗೆ ಕಾರಿನ ಬಾಗಿಲು ತೆರೆಯಲು ಸಾಧ್ಯವಾಯಿತು. ಹೀಗಾಗಿ ಯಾವುದೇ ಅಪಾಯವಿಲ್ಲದೆ ಬಚಾವಾಗಿದ್ದಾರೆ. ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾವಿಗೆ ಬಿದ್ದ ಕಾರನ್ನು ಕ್ರೇನ್ ಮೂಲಕ ಹೊರತೆಗೆಯಲಾಗಿದೆ.

WhatsApp Group Join Now
Telegram Group Join Now
Share This Article