K2kannadanews.in
Health Tips ಆರೋಗ್ಯ ಭಾಗ್ಯ : ಪ್ರಸ್ತುತ ದಿನಗಳಲ್ಲಿ ದೇಹದ ಆರೋಗ್ಯ ಸಮತೋಲನದಲ್ಲಿ ಇಡಲು ಸಾಕಷ್ಟು ಕಸರತ್ತು ಮಾಡಬೇಕಿದೆ. ಇತಿಗೆ ಸಾಮಾನ್ಯವಾಗಿರುವ ಒಂದು ಕಾಯಿಲೆ ಎಂದರೆ ಕಿಡ್ನಿಯಲ್ಲಿ ಸ್ಟೋನ್ ಎಂಬುದು. ಇದಕ್ಕೆ ಕಾರಣ ಮತ್ತು ಪರಿಹಾರ ನೋಡುವುದಾದರೆ ಸಾಕಷ್ಟು ಸುಲಭದ ಮಾರ್ಗವಿದೆ. ನೀವು ಈ ಮನೆ ಮದ್ದು ಉಪಯೋಗಿಸಲು ಆರಂಭಿಸಿದರೆ ಯೂರಿಕ್ ಆಸಿಡ್ ಮಟ್ಟವನ್ನ ತಡೆದು ಆರೋಗ್ಯ ಸಮತೋಲನೆ ಮಾಡಿಕೊಳ್ಳಬಹುದು.
ತ್ರಪಿಂಡದಲ್ಲಿ ಯೂರಿಕ್ ಆಯಸಿಡ್ ಉತ್ಪತ್ತಿಯಾಗುತ್ತದೆ. ಯೂರಿಕ್ ಆಯಸಿಡ್ ಸಮತೋಲನದಲ್ಲಿ ಇರದೇ ಇದ್ದಾಗ ಮಧುಮೇಹ ಹಾಗೂ ಅಧಿಕ ತೂಕದಂತಹ ತೊಂದರೆಗಳು ಶುರುವಾಗುತ್ತವೆ. ಅಧಿಕ ಮದ್ಯಪಾನ ಅಥವಾ ಜಂಕ್ ಫುಡ್ ಮತ್ತು ಆಹಾರ ಕ್ರಮದಲ್ಲಿನ ಬದಲಾವಣೆ ಇದಕ್ಕೆ ಕಾರಣ. ಯೂರಿಕ್ ಆಯಸಿಡ್ ಪ್ರಮಾಣ ಮಹಿಳೆಯರಲ್ಲಿ 2.4 ರಿಂದ 6 ಮಿಲಿಗ್ರಾಮ್ ಹಾಗೂ ಪುರುಷರಲ್ಲಿ 3.4 ರಿಂದ 7 ಮಿಲಿಗ್ರಾಮ್ ಇರುತ್ತದೆ. ಈ ಪ್ರಮಾಣ ಹೆಚ್ಚಾದರೆ ಕಿಡ್ನಿ ಸ್ಟೋನ್ ಮತ್ತು ಸಂಧಿವಾತ ತೊಂದರೆ ಆಗುವ ಸಾಧ್ಯತೆ ಹೆಚ್ಚು.
ಮನೆಮದ್ದಿನಿಂದ ಯೂರಿಕ್ ಆಸಿಡ್ ಮಟ್ಟವನ್ನು ಬಹಳ ಮಟ್ಟಿಗೆ ನಿಯಂತ್ರಿಸಬಹುದು. ಹೆಚ್ಚು ನಾರಿನಂಶ ಇರುವ ಆಹಾರವನ್ನು ಸೇವಿಸಬೇಕು. ಆಯಾ ಋತುವಿಗೆ ಸಿಗುವಂತಹ ಹಣ್ಣುಗಳು, ಸೊಪ್ಪು, ತರಕಾರಿಗಳ ಬಳಕೆ ಮಾಡಬೇಕು. ಓಂಕಾಳು, ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತೆ. ಇದ್ರಲ್ಲಿ ಒಮೆಗಾ 3 ಆಯಸಿಡ್ ಇದ್ದು, ಪ್ರತಿದಿನ ಮುಕ್ಕಾಲು ಚಮಚದಷ್ಟು ಅಜವಾನವನ್ನು ಹಾಕಿದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದ್ರೆ ಹೆಚ್ಚಿನ ಲಾಭ ಸಿಗುತ್ತೆ. ಅಜವಾನವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಫಿಲ್ಟರ್ ಮಾಡಿದ ನೀರನ್ನು ಕುಡಿಯಬೇಕು.
ಅಸಿಡಿಟಿ ಮತ್ತು ಮಲಬದ್ಧತೆ ಸಮಸ್ಯೆ ಇದ್ದರೆ ಇದು ಒಳ್ಳೆ ಮನೆಮದ್ದು. ಇದರಲ್ಲಿ ಫೈಬರ್, ಮೆಗ್ನೀಸಿಯಮ್, ಮ್ಯಾಂಗನೀಸ್ ನಂತಹ ಅನೇಕ ಪೋಷಕಾಂಶಗಳಿದ್ದು, ಇದು ಆಯಸಿಡಿಟಿ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.