K2kannadanews.in
Crime News ಬೆಂಗಳೂರು : ಇಷ್ಟು ದಿನಗಳ ಕಾಲ ನಾವು ವಿವಿಧ ರೀತಿಯಲ್ಲಿ ಕಳ್ಳತನ ಮಾಡುವ ಕಳ್ಳರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಾ ಕಳ್ಳ ಪಾರಿವಾಳಗಳನ್ನೇ ಬಳಸಿ ಕಳ್ಳತನ ಮಾಡಿ ಎಲ್ಲರೂ ದಂಗಾಗಿಸುವಂತೆ ಮಾಡಿದ್ದಾನೆ.
ಬೆಂಗಳೂರಿನ ನಗರ್ತಪೇಟೆಯ ನಿವಾಸಿಯಾದ ಹೊಸೂರಿನ 38 ವರ್ಷದ ಪಾರಿವಾಳ ಮಂಜ ಬಂಧಿತ ಆರೋಪಿಯಾಗಿದ್ದು, ಕಳ್ಳತನ ಮಾಡಲು ಸೆಕ್ಯೂರಿಟಿಗಳಿಲ್ಲದ ಬಹು ಮಹಡಿ ಕಟ್ಟಡಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಈತ ಆ ಕಟ್ಟಡಗಳ ಬಳಿ ಪಾರಿವಾಳಗಳನ್ನು ಹಾರಿಬಿಡುತ್ತಿದ್ದ.ಬಳಿಕ ತಾನು ಸಾಕಿದ್ದ ಪಾರಿವಾಳಗಳನ್ನು ಹಿಡಿದುಕೊಳ್ಳುವವನಂತೆ ನಟಿಸಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಬಳಿಕ ಅವುಗಳ ಮುಂಭಾಗದ ಬಾಗಿಲ ಬೀಗ ಮುರಿದು ಒಳ ನುಗ್ಗಿ ಚಿನ್ನ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ.
ಇದೀಗ ಪೊಲೀಸರು ಆತನನ್ನು ಬಂಧಿಸಿದ್ದು ಸಿಟಿ ಮಾರ್ಕೆಟ್ ಹಾಗೂ ಹಲಸೂರು ಗೇಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿಂದೆಯೂ ಹಲವು ಬಾರಿ ಬಂಧಿತನಾಗಿದ್ದ ಮಂಜ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮತ್ತದೇ ಕೃತ್ಯ ಎಸಗುತ್ತಿದ್ದ.