K2kannadanews.in
Basic facilities ಸಿರವಾರ : ಸ್ವಾತಂತ್ರ್ಯ ಬಂದು 75 ವರ್ಷ (years) ಕಳೆದ್ರು ಈ ಒಂದು ಗ್ರಾಮಕ್ಕೆ (village) ಯಾವುದೇ ಕನಿಷ್ಠ ಮೂಲಭೂತ (basic needs) ಸೌಲಭ್ಯಗಳು ದೊರೆತಿಲ್ಲ. ಇನ್ನು ಸೌಲಭ್ಯ ನೀಡಬೇಕಾದ ಪಿಡಿಓ (PDO) ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹಿರೇಹಣಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೊಲದಿನ್ನಿ ಗ್ರಾಮದ ದಿನ ನಿತ್ಯ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮದಲ್ಲಿ ನಿತ್ಯ ಬಳಸುವ ಕುಡಿಯುವ ನೀರಿನ ಟ್ಯಾಂಕ್ ಹದಗೆಟ್ಟಿದೆ. ಅಲ್ಲಲ್ಲಿ ಪೈಪ್ಲೈನ್ ಹೊಡೆದು ಹೊಗಿದೆ ಹಾಗೂ ಹದಗೆಟ್ಟ ರಸ್ತೆಯಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುತ್ತಿವೆ.
ಗ್ರಾಮದ್ದಿ ಬಳಸಲು ನೀರಿಲ್ಲದೆ ಕೆನಾಲ್ ಗೆ ಬಟ್ಟೆ ತೊಳೆಯಲು ಹೊಗುವ ಪರಿಸ್ಥಿತಿ ಇದ್ದು ಈ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಓ ಪ್ರಸಾದ್ ಸೇರದಂತೆ ಎಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನೆಯ ಆಗಿಲ್ಲ. ಇನ್ನು ತಾಲೂಕು ಪಂಚಾಯಿತಿ ಇಓ ಶಶಿಧರ್ ಸ್ವಾಮಿ ಅವರಿಗೆ ದೂರು ನೀಡಿದ್ದೇವೆ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರ ಕಾದು ನೋಡಬೇಕಿದೆ.