K2kannadanews.in
Leopard ಮಸ್ಕಿ : ತಾಲೂಕಿನಲ್ಲಿ ಕಾಡು ಪ್ರಾಣಿಗಳ ಪ್ರತ್ಯಕ್ಷ ವಾಗುವುದು ಹೆಚ್ಚಾಗಿದ್ದು ಕರಡಿ ಚಿರತೆ ಆಯ್ತು ಇದೀಗ ಚಿರತೆ ಹೋಲುವ ಕಾಡು ಬೆಕ್ಕು ಪ್ರತ್ಯಕ್ಷವಾಗಿದೆ ಡಬ್ಬೇರಮಡು-ಭಟ್ರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಪ್ರತ್ಯಕ್ಷವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಡಬ್ಬೇರಮಡು ಗ್ರಾಮದ ಹೊರವಲಯದ ಜಮೀನುಗಳಲ್ಲಿ ಚಿರತೆಗೆ ಹೋಲುವ ಕಾಡಿನ ಬೆಕ್ಕು ಪ್ರತ್ಯಕ್ಷವಾಗಿದ್ದು, ಸುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ನಿವಾಸಿಗಳು ಕೃಷಿ ಚಟುವಟಿಕೆಗಾಗಿ ಹೊಲಗಳಿಗೆ ತೆರಳಲು ಹಿಂದೇಟು ಹಾಕುವಂತಾಗಿದೆ. ಇನ್ನು ಹೊಲಗಳಲ್ಲಿ ಗುಡಿಸಲು ಹಾಕಿಕೊಂಡಿರುವ ಹಲವು ಕುಟುಂಬಗಳು ಆತಂಕದಿಂದ ದಿನದೂಡುತ್ತಿವೆ.
ಇತ್ತೀಚೆಗೆ ಇದೇ ಗ್ರಾಮದ ಸುತ್ತಲಿನಲ್ಲಿ ಪ್ರದೇಶದಲ್ಲಿ, ಕರಡಿಯೊಂದು ವ್ಯಕ್ತಿಯೋರ್ವನ ಮೇಲೆ ದಾಳಿ ಮಾಡಿ ಕಣ್ಣು ಕಳೆದಿತ್ತು. ಅಲ್ಲದೇ ಮಾರಲದಿನ್ನಿ ತಾಂಡಾದ ಕರೆಗುಡ್ಡದಲ್ಲಿ ಚಿರತೆ ಪ್ರತ್ಯೇಕ್ಷವಾಗಿ ಆಕಳು ಕರು ತಿಂದು ಹಾಕಿತ್ತು, ಈ ಘಟನೆ ಇದೀಗ ಕಾಡು ಬೆಕ್ಕು ಪ್ರತ್ಯಕ್ಷವಾಗಿರುವುದು ಮತ್ತಷ್ಟು ಭಯಕ್ಕೆ ಕಾರಣವಾಗಿದೆ.