K2kannadanews.in
Political News ಸಿಂಧನೂರು : ರಾಜ್ಯ ರಾಜಕೀಯದಲ್ಲಿ ಸಿಎಂ ರಾಜಿನಾಮೆ ವಿಚಾರದ ಜೊತೆ, 50-50 ಸಿಎಂ ಅಧಿಕಾರ ಹಂಚಿಕೆ ವಿಚಾರವೂ ಜೋರಾಗಿಯೇ ಚರ್ಚೆ ನಡೆದಿದೆ, ಈ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಅದೆಲ್ಲಾ ಬೇರೆ ವಿಚಾರ ಎಂದು ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಹರಿಯಾಣದಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ವಿಚಾರದಲ್ಲಿ ನನಗೆ ಬಹಳ ಆತ್ಮವಿಶ್ವಾಸವಿತ್ತು. ಹರಿಯಾಣದಲ್ಲಿ ನಮ್ಮ ಸರಕಾರ ಬಂದೆ ಬರ್ತದೆ ಅನ್ನೋದು, ಇನ್ನೂ ಕೂಡ ಪೈನಲ್ ರಿಸಲ್ಟ್ ಬಂದಿಲ್ಲ. ಜನ ನಮಗೆ ತೀರ್ಪು ಕೊಟ್ಟಿದ್ದಾರೆ. ಪ್ರಜಾ ಪ್ರಭುತ್ವದಲ್ಲಿ ಜನರ ತೀರ್ಪು ಒಪ್ಪಿಕೊಳ್ತೀವಿ. ಇದರ ಬಗ್ಗೆ ಪರಿಶೀಲನೆ ಕೂಡ ಮಾಡ್ತೀವಿ. ನಾವು ಎಲ್ಲಿ ಎಡವಿದ್ದೀವಿ ಅಂತ ಪರಿಶೀಲಿಸುತ್ತೇವೆ. ಜನರ ಕೊಟ್ಟಿರುವ ತೀರ್ಪಿನ ಬಗ್ಗೆ ನಾವೆಲ್ಲರೂ ಗೌರವ ಕೊಡಲೇ ಬೇಕು.
ಹರಿಯಾಣದಲ್ಲಿ ಕೈ ಹಿನ್ನಡೆಗೆ ಮುಡಾ ಕೇಸ್ ಪ್ರಸ್ತಾಪ ವಿಚಾರ. ಯಾವ ಕಾಂಗ್ರೆಸಿಗರು ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಮುಖ್ಯಮಂತ್ರಿಗಳಿಗೆ ಯಾವುದೂ ಕೂಡ ಸಂಬಂಧವಿಲ್ಲ. ಇಗಾಗಲೇ ತನಿಖೆ ನಡೆಯುತ್ತಿದೆ. ಅದ್ಕೂ ಇದ್ಕೂ ಯಾವುದೇ ಸಂಬಂಧವಿಲ್ಲ ಎಂದರು. ಇನ್ನೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ವಾಗಿ ಮಾತನಾಡಿದ ಅವರು ಯಾವ ಬದಲಾವಣೆ ಆಗೋದಿಲ್ಲ ಎಂದರು. 50-50 ಸಿಎಂ ಅಧಿಕಾರ ಹಂಚಿಕೆ ವಿಚಾರಗಿಯೂ ಮಾತನಾಡಿ ಅದೆಲ್ಲಾ ಬೇರೆ ವಿಚಾರ. ನಮ್ಮ ಸರಕಾರ ಇರ್ತದೆ. ಸಿಎಂ ಮುಂದುವರಿಯುತ್ತಾರೆ ಎಂದರು.