K2kannadanews.in
warning against CM ರಾಯಚೂರು : ಸಿಂಧನೂರು ದಸರಾ, ಗೋಕಾಕ್ ಚಳುವಳಿ ಸಂಭ್ರಮ ಕಾರ್ಯಕ್ರಮ ನಿಮಿತ್ಯ ಎರಡು ದಿನಗಳ ಕಾಲ ರಾಯಚೂರಿಗೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಜಿಲ್ಲೆಯ ರೈತರು ಮತ್ತು ದಲಿತಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿ ಕಪ್ಪು ಬಾವುಟ ತೋರಿಸಿ ಘೆರಾವ್ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಕೆಳಭಾಗದ ರೈತರಿಗೆ ತುಂಗಭದ್ರ ನಾಲೆಯಿಂದ ಎರಡು ತಿಂಗಳು ಕಳೆದರೂ ಕೂಡ ನೀರು ತಲುಪಿಲ್ಲ ಎಂಬ ನಿಟ್ಟಿನಲ್ಲಿ, ಅಸಮಾಧಾನ ವ್ಯಕ್ತಪಡಿಸಿ ಸಿಎಂ ಅವರಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೇಳಿದರು, ಯಾವುದೇ ಸಮಸ್ಯೆ ಬಗೆಹರಿಯದ ಕಾರಣ ಮುಖ್ಯಮಂತ್ರಿಗಳಿಗೆ ಘೆರಾವ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದರೆ.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗಿಕರಣ ಮಾಡುವಂತೆ ನ್ಯಾಯಾಲಯ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿ, ಎರಡು ತಿಂಗಳಾಗಿದೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಎಂದು ಅಸಮಾಧಾನ ವ್ಯಕ್ತಪಡಿಸಿ ವಿವಿಧ ದಲಿತ ಪರ ಸಂಘಟನೆಗಳು, ಜಿಲ್ಲೆಯಲ್ಲಿ ಸಿಎಂ ಅವರಿಗೆ ಕಂಡಲ್ಲಿ ಕಪ್ಪು ಬಾವುಟ ತೋರಿಸಿ ಘೆರಾವ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಗೆ ಆಗಮಿಸುತ್ತಿರುವ ಸಿಎಂ ಪ್ರವಾಸದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದೆ ಇರಲಿ, ಎಂಬ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಘೆರಾವ್ ಎಚ್ಚರಿಕೆ ನೀಡಿರುವ ಹೋರಾಟಗಾರರಿಗೆ ಮನವೊಲಿಸುವ ಪ್ರಯತ್ನವು ಕೂಡ ಮಾಡುತ್ತಿದೆ.