K2kannadanews.in
Crime news ವೈರಲ್ ವೀಡಿಯೋ : ಮೊಬೈಲ್ ಗೀಳು ಎಷ್ಟರ ಮಟ್ಟಿಗೆ ನಮ್ಮನ್ನು ಆವರಿಸಿದೆ ಎಂದರೆ ಅದಕ್ಕಾಗಿ ನಾವು ಏನಾದ್ರು ಮಾಡಲು ಸಿದ್ದರಿರುತ್ತೇವೆ. ಅಂಥದ್ದೆ ಒಂದು ಘಟನಾವಳಿ ವೀಡಿಯೋ ವೈರಲ್ ಆಗಿದ್ದು. ಪುಟ್ಟ ಬಾಲಕನೋರ್ವ ಮೊಬೈಲ್ಗಾಗಿ ತನ್ನ ತಾಯಿಯ ತಲಯೆನ್ನು ಬ್ಯಾಟ್ನಿಂದ ಹೊಡೆದಿರುವ ಘಟನೆ ವರದಿಯಾಗಿದೆ.
Xನಲ್ಲಿ DilipKu24388061 ಖಾತೆಯಿಂದ ಅಪ್ ಲೋಡ್ ಆಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಯಾವ ರಾಜ್ಯದಲ್ಲಿ ನಡೆದಿದೆ ಎಂಬುದು ವರದಿಯಾಗಿಲ್ಲ. ಆದ್ರೂ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಬಾಲಕನೋರ್ವ ಶಾಲೆಯಿಂದ ಬಂದ ಬಳಿಕ ಟಿವಿಯನ್ನು ಆನ್ ಮಾಡಿ ಕುಳಿತುಕೊಂಡಿರುತ್ತಾನೆ. ಇದನ್ನು ನೋಡಿದ ತಾಯಿ ಮಗನಿಗೆ ಗದರಿ ಮೊಬೈಲ್ ಕಸಿದುಕೊಂಡು ಎರಡೇಟು ನೀಡಿ ಊಟಕ್ಕೆ ಕುಳಿತುಕೊಳ್ಳುತ್ತಾಳೆ.
ತಾಯಿ ಬೈದ ತಕ್ಷಣ ಪುಸ್ತಕ ಹಿಡಿದು ಕುಳಿತುಕೊಳ್ಳುವ ಬಾಲಕ ಕೆಲ ಕ್ಷಣದ ಬಳಿಕ ಎದ್ದು ಹೊರಗೆ ಹೋಗುತ್ತಾನೆ. ವಾಪಸ್ ಬಂದ ಬಳಿಕ ಅಲ್ಲೇ ಇಡಲಾಗಿದ್ದ ಕ್ರಿಕೆಟ್ ಬ್ಯಾಟನ್ನು ತೆಗೆದುಕೊಂಡು ತಾಯಿಯ ತಲೆಗೆ ಬಲವಾಗಿ ಹೊಡೆಯುತ್ತಾನೆ. ತಲೆಗೆ ಏಟು ಬಿದ್ದ ತಕ್ಷಣ ತಾಯಿ ಎಚ್ಚರ ತಪ್ಪಿ ಬೀಳುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.