ಹಸುಗೂಸಿನ ಅಂಗಾಂಗಗಳನ್ನು ತಿಂದ ಇಲಿಗಳು : ತಂದೆಗೆ 16 ವರ್ಷ ಜೈಲು ಶಿಕ್ಷೆ..!

K 2 Kannada News
ಹಸುಗೂಸಿನ ಅಂಗಾಂಗಗಳನ್ನು ತಿಂದ ಇಲಿಗಳು : ತಂದೆಗೆ 16 ವರ್ಷ ಜೈಲು ಶಿಕ್ಷೆ..!
WhatsApp Group Join Now
Telegram Group Join Now

K2kannadanews.in

Crime news ಅಂತರಾಷ್ಟ್ರೀಯ ಸುದ್ದಿ : ಆರು ತಿಂಗಳ ಮಗುವಿನ ಅಂಗಾಂಗಳನ್ನು ಇಲಿಗಳು ತಿಂದ ಭಯಾನಕ ಘಟನೆ ಅಮೆರಿಕದ ಇಂಡಿಯಾನಾದಲ್ಲಿ ನಡೆದಿದ್ದು, ಅಲ್ಲಿನ ನ್ಯಾಯಾಲಯ ತಂದೆಗೆ ಬರೋಬ್ಬರಿ 16 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

 

ಈ ಘಟನೆಯು 2023 ಸೆಪ್ಟೆಂಬರ್‌ನಲ್ಲಿ ನಡೆದಿದ್ದು ಡೇವಿಡ್ ಸ್ಕೋನಬಾಮ್ ಎಂಬುವ ತಂದೆ, ಮನೆಯನ್ನು ಅತ್ಯಂತ ಕೆಟ್ಟ ಸ್ಥಿತಿಯಲ್ಲಿರಿಸಿ, ಇಲಿಗಳ ರಾಶಿಯಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆ 6 ತಿಂಗಳ ಮಗುವಿನ ಮುಖ, ಕೈಕಾಲು, ಬೆರಳುಗಳು ಸೇರಿದಂತೆ 50 ಕ್ಕೂ ಹೆಚ್ಚು ಕಡೆ ಇಲಿಗಳು ಕಚ್ಚಿ ಗಾಯ ಮಾಡಿತ್ತು. ಈ ಬಗ್ಗೆ ಡೇವಿಡ್‌ 911 ಕ್ಕೆ ಕರೆ ಮಾಡಿ, ಮಗು ಇಲಿಗಳ ದಾಳಿಯಿಂದಾಗಿ ರಕ್ತದ ಮಡುವಿನಲ್ಲಿ ಇರುವುದಾಗಿ ತಿಳಿಸಿದ್ದಾನೆ.

ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಆದರೆ ಇಲಿಗಳ ದಾಳಿ ಎಷ್ಟು ಭಯಾನಕವಾಗಿತ್ತು ಎಂದರೆ, ಮಗುವಿನ ಬಲಗೈಯ ಎಲ್ಲಾ ನಾಲ್ಕು ಬೆರಳುಗಳನ್ನು ತಿಂದು ಹಾಕಿತ್ತು. ಇತರ ಬೆರಳುಗಳಲ್ಲಿ ಅದರ ತುದಿಯ ಮೂಳೆಗಳು ಕಾಣಿಸುತ್ತಿತ್ತು. ಇಲಿಗಳು ಮಗುವನ್ನು ಶಾಶ್ವತವಾಗಿ ವಿಕಾರಗೊಳಿಸಿತ್ತು. ಇದರ ಪರಿಣಾಮ ಡೇವಿಡ್‌ ಜೀವಮಾನವನ್ನೇ ಜೈಲಿನಲ್ಲಿ ಕಳೆಯುವಂತೆ ಮಾಡಿದೆ. ಬುಧವಾರ ಅಕ್ಟೋಬರ್ 2 ರಂದು ಆತನಿಗೆ ಕೋರ್ಟ್ 16 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

WhatsApp Group Join Now
Telegram Group Join Now
Share This Article