K2kannadanews.in
VIRAL VIDEO ವೈರಲ್ ಸುದ್ದಿ : ಹಿಂದೆ ಹಿರಿಯರು ಬುದ್ದಿ ಹೇಳಬೇಕಾದ್ರೆ ಒಂದು ವಾಕ್ಯ ಬಳಸೋರು. ಸೆಗಣಿ ತಿನ್ನು ಅಂತಾ. ಆಕಾಲನೂ ಬಂದೇ ಬಿಡ್ತು. ಇಲ್ಲೊಬ್ಬ ಯುವಕ ನಿಜವಾಗಿಯೂ ಸಗಣಿ ತಿಂದು ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಕೆಲ ನೆಟ್ಟಿಗರು ಇನ್ನೇನೇನು ನೋಡ್ಬೇಕು ಕಣ್ಣಲ್ಲಿ ಮತ ಕಮೆಂಟ್ ಮಾಡಿದ್ದಾರೆ.
ಹೌದು ಈ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನಸ್ಟಾಗ್ರಾಂ ನಲ್ಲಿ Viralvideop ಹೆಸರಿನ ಖಾತೆಯಿಂದ ಅಪ್ ಲೋಡ ಮಾಡಲಾಗಿದ್ದು, ಇಲ್ಲೋಬ್ಬ ಭೂಪ ಚಪಾತಿ ಜೊತೆ ಇಷ್ಟವಾದ ಪಲ್ಯ ಬಾಯಿ ಚಪ್ಪರಿಸಿ ತಿನ್ನುವಂತೆ ಚಪಾತಿಗೆ ಸಗಣಿ ಬೆರೆಸಿ ತಿಂದಿದ್ದಾನೆ.
ಇನ್ನು ಏನೇನು ಕಾಲ ಬರುತ್ತೋ, ರಾತ್ರೋರಾತ್ರೀ ಹೆಸರು ಮಾಡಲು ಏನೇನೋ ಮಾಡಿದ್ದು ನೋಡಿದ್ದೇವೆ. ಈ ವ್ಯಕ್ತಿ ಹಿರಿಯರ ಬೈಗಳನ್ನು ನಿಜ ಮಾಡಿ ತೋರಿಸಿದ್ದಾನೆ.