ಓವರ್ ಲೋಡ್ ಅಕ್ರಮ ಮರಳು ಸಾಗಾಟ : 6 ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು..

K 2 Kannada News
ಓವರ್ ಲೋಡ್ ಅಕ್ರಮ ಮರಳು ಸಾಗಾಟ : 6 ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು..
Oplus_131072
WhatsApp Group Join Now
Telegram Group Join Now

K2kannadanews.in

Crime News ರಾಯಚೂರು : ಅಕ್ರಮವಾಗಿ ಮರಳು (Illegal sand) ಸಾಗಿಸುತ್ತಿದ್ದ (Transport) ಆರು ಟಿಪ್ಪರ್ ಲಾರಿಗಳನ್ನು (Tipper) ರಾಯಚೂರು ಗ್ರಾಮಾಂತರ ಪೊಲೀಸರು (police) ಸಾತ್ ಮೈಲ್ ಕ್ರಾಸ್ ಬಳಿ ವಶಕ್ಕೆ ಪಡೆದ ಘಟನೆ ಕಳೆದ ರಾತ್ರಿ ಜರುಗಿದೆ.

ರಾಯಚೂರು (Raichur) ತಾಲೂಕಿನ ಸಾತ್ ಮೈಲ್ ಕ್ರಾಸ್ (Sath mail cross) ಬಳಿ ಬಂದು ಘಟನೆ ಜರುಗಿದ್ದು, ಮಾನ್ವಿ (Manvi) ಕಡೆಯಿಂದ ಬೀದರ್ ಗೆ (Bidar) ಹೊರಟಿದ್ದ 6 ಟಿಪ್ಪರ ಲಾರಿಗಳನ್ನು, ರಾಯಚೂರು ಜಿಲ್ಲಾ ಪೊಲೀಸ್ (SP) ವರಿಷ್ಠಾಧಿಕಾರಿ ಎಸ್.ಪುಟ್ಟಮಾದಯ್ಯ ಅವರ ನೇತೃತ್ವದಲ್ಲಿ ದಾಳಿ (Attack) ನಡೆಸಿ ವಶಕ್ಕೆ ಪಡೆಯಲಾಗಿದೆ. ಇನ್ನು ಈ ಒಂದು ಟಿಪ್ಪರ್ ಲಾರಿಗಳು ಮಾನ್ವಿಯ ಕಾಂಗ್ರೆಸ್ (Congress) ಮುಖಂಡ ಆಲ್ದಾಳ ವೀರಭದ್ರಪ್ಪ ಅವರಿಗೆ ಸೇರಿದ್ದು ಎಂದು ಜೈ ಜನಸೇವಾ ಫೌಂಡೇಶನ್ ಆರೋಪಿಸುತ್ತಿದೆ. ಟಿಪ್ಪರ್ ಗಾಡಿಗಳಿಗೆ ರಾಯಲ್ಟಿ ಇದೆ, ಆದರೆ ಸಪ್ಟೆಂಬರ್ 30 ಬೆಳಗ್ಗೆ 11 ಗಂಟೆಗೆ ರಾಯಲ್ಟಿ ಪಡೆಯಲಾಗಿದೆ. ಆದರೆ ಅದು ಅಕ್ಟೋಬರ್‌ 2ನೇ ಪರವಾನಿಗೆ ಕೊಟ್ಟಿದ್ದಾರೆ. ಒಂದು ರಾಯಲ್ಟಿ ಬೆಳಗ್ಗೆಯಿಂದ ಸಂಜೆವರೆಗೆ ಹಲವು ಟ್ರಿಪ್ ಗಳನ್ನ ಅಕ್ರಮವಾಗಿ ಮರಳು ಸಾಗಿಸಿದ್ದಾರೆ. ತದನಂತರ, ರಾತ್ರಿ ವೇಳೆ ಆರು ಟಿಪ್ಪರ್ ಗಳಲ್ಲಿ ಬೀದರ್ ಕಡೆಗೆ ಮರಳು ಸಾಗಿಸುತ್ತಿದ್ದಾರೆ ಎಂದು ಆರೂಪಿಸಿದ್ದಾರೆ.

ಇನ್ನೂ ಸರ್ಕಾರದ ನಿಯಮನುಸಾರ 1,330 ಕೆಜಿ ಮರಳಿಗೆ ಪರವಾನಿಗೆಯನ್ನು ನೀಡಲಾಗಿದೆ. ಆದರೆ ಇವರು ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಿದ್ದು ದುಪ್ಪಟ್ಟು ಅಂದರೆ 38,000ಕ್ಕೂ ಹೆಚ್ಚು ಕೆಜಿ ಮರಳನ್ನ ಸಾಗಿಸುತ್ತಿರುವುದು ಕಂಡುಬಂದಿದೆ. ಇದೀಗ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ದಾಳಿ ನಡೆಸಿದ ಸ್ಥಳದಿಂದ ಆರು ಟಿಪ್ಪರ್ ಲಾರಿಗಳನ್ನು ಸ್ಟೇಷನ್ ಗೆ ತೆಗೆದುಕೊಂಡು ಹೋಗಿದ್ದು ಸೂಕ್ತ ರೀತಿಯ ತನಿಖೆ ಮಾಡಿ ತಪ್ಪಿದ ಸ್ಥಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಜೈ ಜನಸೇವಾ ಫೌಂಡೇಶನ್ ಒತ್ತಾಯವಾಗಿದೆ.

WhatsApp Group Join Now
Telegram Group Join Now
Share This Article