ಲಾರಿ ಓವರ್ ಟೇಕ್ ವೇಳೆ ಹಿಂಬದಿ ಚಕ್ರಕ್ಕೆ ಬೈಕ್ ಸವಾರ ಸಿಲುಕಿ ಸಾವು..

K 2 Kannada News
ಲಾರಿ ಓವರ್ ಟೇಕ್ ವೇಳೆ ಹಿಂಬದಿ ಚಕ್ರಕ್ಕೆ ಬೈಕ್ ಸವಾರ ಸಿಲುಕಿ ಸಾವು..
Oplus_131072
WhatsApp Group Join Now
Telegram Group Join Now

K2kannadanews.in

Accident News ಸಿರವಾರ : ಮುಂದೆ ಸಾಗುತ್ತಿದ್ದ ಲಾರಿಯನ್ನು (Lorry) ಓವರ್ ಟೇಕ್ (Overtake) ಮಾಡುವ ವೇಳೆ, ಬೈಕ್ ಸವಾರ (Biker) ಆಯತಪ್ಪಿ ಹಿಂಬದಿಯ ಚಕ್ರಕ್ಕೆ (Wheel) ಬಿದ್ದು ಮೃತಪಟ್ಟು (Death), ಓರ್ವ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಿರವಾರ ಪಟ್ಟಣದಲ್ಲಿ ಜರುಗಿದೆ.

ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ಪಟ್ಟಣದ ರಾಯಚೂರು- ಲಿಂಗಸೂರು ಮುಖ್ಯ ರಸ್ತೆಯ (Main road) ಬಂಗ್ಲೆ ಹಳ್ಳದ ಬಳಿ ಘಟನೆ ಜರುಗಿದೆ. ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದು ಇನ್ನೀರ್ವ ಗಂಭೀರ ಗಾಯಗೊಂಡಿರುವ ಘಟನೆ ಭಾನುವಾರ (Sunday) ಸಂಜೆ ಜರುಗಿದೆ. ಮೃತ ವ್ಯಕ್ತಿಯನ್ನು ಕೆ.ಗುಡದಿನ್ನಿ ಗ್ರಾಮದ ಚನ್ನಬಸವ ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ವ್ಯಕ್ತಿಯ ಹೆಸರು ಕೂಡ ಚನ್ನಬಸವ ಜಾಲಾಪೂರು ಎಂದು ತಿಳಿದು ಬಂದಿದೆ.

ರಾಯಚೂರಿನಿಂದ ಲಿಂಗಸುಗೂರು ಕಡೆಗೆ ಹೊರಟಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಹೊತ್ತೊಯ್ಯುತ್ತಿದ್ದ ಲಾರಿಯನ್ನು ಬೈಕ್ ಸವಾರರು ಓರ್ವ ಟೇಕ್ ಮಾಡುವಾಗ ಲಾರಿ ಚಕ್ರಕ್ಕೆ ಸಿಲುಕಿದ್ದಾನೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿಪಿಐ(CPI) ಶಶಿಕಾಂತ ಎಂ, ಪಿ.ಎಸ್.ಐ (PSI) ಅಮರೇಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದು ಲಾರಿ ಚಾಲಕನನ್ನು ವಶಕ್ಕೆ ಪಡೆದು, ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
Share This Article