K2kannadanews.in
insult national fla ರಾಯಚೂರು : ರಾಷ್ಟ್ರಧ್ವಜವನ್ನು (National flag) ಕಸ ಸಾಗಿಸುವ ವಾಹನದ ಕಸದ ತೊಟ್ಟಿಯಲ್ಲಿ, ಧ್ವಜ ಇಟ್ಟು ರಾಷ್ಟ್ರಧ್ವಜಕ್ಕೆ ಅಪಮಾನ (Insult) ಮಾಡಿದ ಘಟನೆ ಬಿಚ್ಚಲಿ ಗ್ರಾಮ ಪಂಚಾಯಿತಿ ಕಚೇರಿ (Gram panchayt office) ಆವರಣದಲ್ಲಿ ಜರುಗಿದೆ.
ರಾಯಚೂರು (Raichur) ತಾಲೂಕಿನ ಬಿಚ್ಚಲಿ (Bichali) ಗ್ರಾಮದ ಪಂಚಾಯಿತಿ ಕಚೇರಿಯಲ್ಲಿ ಘಟನೆ ನಡೆದಿದ್ದು, ಬಿಚ್ಚಾಲಿ ಗ್ರಾಮ ಪಂಚಾಯತಿಯಲ್ಲಿ ರಾಷ್ಟ್ರ ದ್ವಜಕ್ಕೆ ಅಪಮಾನ ಮಾಡಿದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿನಿತ್ಯ ಗ್ರಾಮ ಪಂಚಾಯಿತಿ ಮೇಲೆ ರಾಷ್ಟ್ರಧ್ವಜ ಹಾರಿಸಲಾಗುವುದು. ಅದೇ ರೀತಿ ಪ್ರತಿನಿತ್ಯ ಸಂಜೆ ಧ್ವಜ ಇಳಿಸಲಾಗುವುದು. ಆದರೆ ಇಳಿಸಿದ ರಾಷ್ಟ್ರಧ್ವಜವನ್ನು ಕಚೇರಿ ಒಳಗೆ ಇಡುವ ಬದಲಿಗೆ. ಕಸ ಸಾಗಿಸುವ ವಾಹನದ ಕಸದ ತೊಟ್ಟಿಯಲ್ಲಿ ಇರಿಸಿದ್ದಾರೆ.
ಗ್ರಾಮದ ಕಸ ಸಾಗಿಸಿ ಬಂದ ವಾಹನದ ಕಸ ತುಂಬುವ ಜಾಗದಲ್ಲಿ ಧ್ವಜ ಇರಿಸಲಾಗಿದ್ದು, ಇದು ಸಿಬ್ಬಂದಿಗಳ ನಿರ್ಲಕ್ಷ್ಯ ಎಂದು ಗ್ರಾಮಸ್ಥರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಲವು ದಿನಗಳಿಂದ ಇದೇ ಕೃತ್ಯ ಮಾಡಲಾಗುತ್ತಿದ್ದು ಯಾರು ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನೂ ನಿರ್ಲಕ್ಷ್ಯ ವಹಿಸಿ ರಾಷ್ಟ್ರ ದ್ವಜಕ್ಕೆ ಅಪಮಾನ ಮಾಡಿದ ಪಂಚಾಯತಿ ಕಛೇರಿಯ ಪ್ರತೀ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.