ಉಕ್ಕಿ ಹರಿಯುವ ಹೊಳೆ ಲೆಕ್ಕಿಸದೆ ದಾಟುವ ಎದೆ ಝಲ್​ ಎನಿಸುವ ವೀಡಿಯೋ ನಡೆದಿದ್ದೆಲ್ಲಿ.?

K 2 Kannada News
ಉಕ್ಕಿ ಹರಿಯುವ ಹೊಳೆ ಲೆಕ್ಕಿಸದೆ ದಾಟುವ ಎದೆ ಝಲ್​ ಎನಿಸುವ ವೀಡಿಯೋ ನಡೆದಿದ್ದೆಲ್ಲಿ.?
WhatsApp Group Join Now
Telegram Group Join Now

K2kannadanews.in

Overflowing stream ಅಮರಾವತಿ : ಅಪಾಯವನ್ನೂ (Dangerous) ಲೆಕ್ಕಿಸದೆ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ (Man) ಬಾಣಂತಿ(Pregnant)ಯನ್ನು ಹೆಗಲ ಮೇಲೆ ಹೊತ್ತು ಉಕ್ಕಿ ಹರಿಯುವ ಹೊಳೆಯ (overflowing stream) ನೀರಿನಲ್ಲಿ ಅಪಾಯ ಲೆಕ್ಕಿಸದೆ ಎತ್ತಿಕೊಂಡು ದಾಟಿದ ಮನಮಿಡಿಯುವ ಘಟನೆ ನಡೆದಿದೆ.

ಹೌದು ಆಂಧ್ರದ (Andra) ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಅಡ್ಡತೀಗಾಲ ಮಂಡಲದ ಪಿಂಜಾರ ಕೊಂಡ ತಾಂಡಾದಲ್ಲಿ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ಬಾಣಂತಿ(Pregnant)ಯನ್ನು ಹೆಗಲ ಮೇಲೆ ಹೊತ್ತಿದ್ದರೆ, ಮತ್ತಬ್ಬ ವ್ಯಕ್ತಿ ನವಜಾತ ಶಿಶುವನ್ನು ಅದೇ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಹೊಳೆ ದಾಟಿದ್ದಾರೆ. ಪಿಂಜಾರಕೊಂಡ ಗ್ರಾಮದ ಬುಡಕಟ್ಟು ಮಹಿಳೆ ವೆಲುಗುಳ ಜ್ಯೋತಿಕಾ ರೆಡ್ಡಿ, ಮೂರು ದಿನಗಳ ಹಿಂದೆ ಕಾಕಿನಾಡ ಜಿಲ್ಲೆಯ ಯಲೇಶ್ವರಂ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಆಕೆಯ ಕುಟುಂಬ ಸದಸ್ಯರು ಉಕ್ಕಿ ಹರಿಯುವ ಹೊಳೆ ದಾಟುವುದನ್ನು ಬಿಟ್ಟು ಬೇರೆ ದಾರಿಯಿಲ್ಲದೆ, ಬ್ಯಾರೇಜ್​ನ ಉದ್ದಕ್ಕೂ ರಭಸವಾಗಿ ಹರಿಯುವ ನೀರಿನಲ್ಲೇ ಹೋಗಿದ್ದಾರೆ.

ಹೊಳೆ ದಾಟುವಾಗ ನೀರಿನ ಮಟ್ಟ ಹಲವಾರು ಬಾರಿ ಏರಿದೆ. ಆದರೆ ತಾಯಿ ಮತ್ತು ಮಗುವನ್ನು ಹೊತ್ತೊಯ್ಯುವುದನ್ನು ಆ ವ್ಯಕ್ತಿಗಳು ನಿಲ್ಲಿಸಿಲ್ಲ. ಅವರ ಅಪಾಯಕಾರಿ ಪ್ರಯಾಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಬುಡಕಟ್ಟು ಜನರ ಸಮಸ್ಯೆಗೆ ಸರ್ಕಾರಗಳು ಇನ್ನಾದರೂ ಸ್ಪಂದಿಸಬೇಕಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article