ಮಾಹಿತಿ ನೀಡದ ಗಾಣದಾಳ PDOಗೆ ಮಾಹಿತಿ ಆಯೋಗ ಮಾಡಿದ್ದೇನು ಗೊತ್ತಾ..?

K 2 Kannada News
ಮಾಹಿತಿ ನೀಡದ ಗಾಣದಾಳ PDOಗೆ ಮಾಹಿತಿ ಆಯೋಗ ಮಾಡಿದ್ದೇನು ಗೊತ್ತಾ..?
WhatsApp Group Join Now
Telegram Group Join Now

K2kannadanews.in

Information Commission ರಾಯಚೂರು : ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗಾಣದಾಳ ಪಂಚಾಯಿತಿ ಪಿಡಿಓ ಅವರಿಗೆ ಕರ್ನಾಟಕ ಮಾಹಿತಿ ಆಯೋಗ ಕಲಬುರ್ಗಿ ಪೀಠ 3000 ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.

ರಾಯಚೂರು ತಾಲೂಕಿನ ಗಾಣಧಾಳ ಗ್ರಾಮದ ಆಸ್ತಿ ಸಂಖ್ಯೆ 419ಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಯಿಂದ ಮುಟೇಷನ್,ಇ-ಖಾತ, ಕಟ್ಟಡ ಪರವಾನಿಗೆ, ದಾಖಲೆಗಳ ಧೃಢೀಕೃತ ಪ್ರತಿ ಒದಗಿಸುವಂತೆ ಆರ್ ಟಿ ಐ ಅಡಿಯಲ್ಲಿ ಸಲ್ಲಿಸಲಾಗಿತ್ತು. ಮಾಹಿತಿ ನೀಡದಿರುವ ಹಿನ್ನೆಲೆಯಲ್ಲಿ ದಂಡ ವಿದಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆ ಕಲಂ 6(1)ರ ಅರ್ಜಿಯಲ್ಲಿ ಕೋರಿರುವ ಸಂಪೂರ್ಣ ಮಾಹಿತಿಯನ್ನು ದೃಢೀಕರಿಸಿ 15 ದಿನದೊಳಗೆ ಉಚಿತವಾಗಿ ನೋಂದಾಯಿತ ಅಂಚೆ ಸ್ವೀಕೃತಿ ಮುಖಾಂತರ ಮೇಲ್ಮನವಿದಾರರಿಗೆ ಒದಗಿಸಿ, ಸದರಿ ಮಾಹಿತಿಯ ಪ್ರತಿ ಮತ್ತು ಅಂಚೆ ಸ್ವೀಕೃತಿಯ ನಕಲು ಪ್ರತಿಗಳನ್ನು ಮುಂದಿನ ವಿಚಾರಣಾ ದಿನಾಂಕದಂದು ಆಯೋಗಕ್ಕೆ ಸಲ್ಲಿಸಿ,ವಿ.ಸಿ. ಮೂಲಕ ಅಥವಾ ಖುದ್ದಾಗಿ ವಿಚಾರಣೆಗೆ ಹಾಜರಾಗಲು PDO ಸೋನಾಸೇರ್ ಅವರಿಗೆ ನಿರ್ದೇಶಿಸಿದೆ.

ಇನ್ನೂ ಆಯೋಗವು ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 19(8)(ಬಿ)ರ ಅಡಿಯಲ್ಲಿ ತಮ್ಮ ಅಧಿಕಾರ ಚಲಾಯಿಸಿ ಮಾಹಿತಿ ನೀಡದ ಹಿನ್ನಲೆ ಅರ್ಜಿದಾರರು ಸಮಸ್ಯೆಯಾಗಿದ್ದು ಮತ್ತು ಇತರೆ ವೆಚ್ಚಗಳಿಗಾಗಿ 3,000 ಗಳ ಪರಿಹಾರವನ್ನು ನೀಡುವಂತೆ ಆದೇಶಿಸ ನೀಡಿದ್ದು, 15 ದಿನಗಳೊಳಗಾಗಿ ರಾಷ್ಟ್ರೀಕೃತ ಬ್ಯಾಂಕಿನಿಂದ ಡಿಮ್ಯಾಂಡ್ ಡ್ರಾಫ್ಟ್‌ ಪಡೆದು ಅರ್ಜಿದಾರರಿಗೆ ನೋಂದಾಯಿತ ಅಂಚೆ ಸ್ವೀಕೃತಿ ಮುಖಾಂತರ ಕಳುಹಿಸಿ ಕೊಟ್ಟು ಅದರ ವರದಿಯನ್ನು ಆಯೋಗಕ್ಕೆ ಸಲ್ಲಿಸಬೇಕೆಂದು ಆಯೋಗವು ಸೋನಾಸೇರ್ ರವರಿಗೆ ಆದೇಶಿಸಿದೆ.

WhatsApp Group Join Now
Telegram Group Join Now
Share This Article