K2kannadanews.in
Viral video ನಾಯಿ ನಿಯತ್ತು : ಪಿಟ್‌ಬುಲ್ ತಳಿಯ ಶ್ವಾನವೊಂದು ಅಪಾಯಕಾರಿ ಹಾಗೂ ವಿಷಕಾರಿ ಕಾಳಿಂಗ ಸರ್ಪದೊಂದಿಗೆ ಕಾದಾಡಿ (Viral Video) ಕೊಂದು ಮಕ್ಕಳ ಜೀವವನ್ನು ಉಳಿಸಿದ ಘಟನೆಯೊಂದು ಉತ್ತರ ಪ್ರದೇಶ ಝಾನ್ಸಿಯಲ್ಲಿ ವರದಿಯಾಗಿದೆ.
ಈ ಘಟನೆಯ ವಿಡಿಯೊ X,ನಲ್ಲಿ vishal singh ಎಂಬ ಖಾತೆಯಿಂದ ಅಪ್ ಲೋಡ್ ಆಗಿದ್ದು, ವೈರಲ್ ಆದ ವೀಡಿಯೋ ನೋಡಿ ನಾಯಿಯ ನಿಯತ್ತಿಗೆ ಶಹಬ್ಬಾಸ್ ಎಂದಿದ್ದಾರೆ. ಶಿವ ಗಣೇಶ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಮನೆಯ ತೋಟಕ್ಕೆ ಹಾವು ನುಗ್ಗಿದ್ದು. ಮನೆ ಮನೆಗೆಲಸದವರ ಮಕ್ಕಳು ಆಟವಾಡುತ್ತಿದ್ದರು. ಹಾವನ್ನು ನೋಡಿದ ಮಕ್ಕಳು ಕಿರುಚಿ ಸಹಾಯಕ್ಕಾಗಿ ಕೂಗಿದ್ದಾರೆ. ಈ ವೇಳೆ ತೋಟದ ಇನ್ನೊಂದು ತುದಿಯಲ್ಲಿ ಕಟ್ಟಿಹಾಕಲಾಗಿದ್ದ ಪಿಟ್ ಬುಲ್ ನಾಯಿ ತನ್ನನ್ನು ಕಟ್ಟಿ ಹಾಕಿದ್ದ ಸಂಕೊಲೆಯನ್ನು ಕಿತ್ತುಕೊಂಡು ಬಂದು ಮಕ್ಕಳನ್ನು ಕಾಪಾಡಿದೆ.
ವೀಡಿಯೊದಲ್ಲಿ, ಪಿಟ್ ಬುಲ್ ನಾಯಿ ಬಾಯಿಯಲ್ಲಿ ಕಾಳಿಂಗ ಸರ್ಪವನ್ನು ಬಿಗಿಯಾಗಿ ಹಿಡಿದುಕೊಂಡು ಪದೇ ಪದೇ ನೆಲಕ್ಕೆ ಬಡಿದು ಕೊಂದಿದೆ. ನಾಯಿ ಹಾವಿನ ಜತೆಗಿನ ಹೋರಾಟವನ್ನು ಸುಮಾರು ಐದು ನಿಮಿಷಗಳ ಕಾಲ ಕಾದಾಡಿ ಕೊನೆಗೆ ಅದನ್ನು ಕೊಂದಿದೆ. ನಾಯಿಯ ಮಾಲೀಕ ಪಂಜಾಬ್ ಸಿಂಗ್ ಪ್ರಕಾರ, ಹಾವು ಕೊಂದು ಜೀವ ಉಳಿಸಿರುವುದು ಇದೇ ಮೊದಲಲ್ಲ. ಇಲ್ಲಿಯವರೆಗೆ, ಜೆನ್ನಿ ಸುಮಾರು ಎಂಟರಿಂದ ಹತ್ತು ಹಾವುಗಳನ್ನು ಕೊಂದು ಮನುಷ್ಯರನ್ನು ಕಾಪಾಡಿದೆ ಎಂದಿದ್ದಾರೆ.