ರಾಯಚೂರು ಮೂಲದ ನಕ್ಸಲ್‌ ರಮೇಶ್‌ & ಕನ್ಯಾಕುಮಾರಿ ಕೋರ್ಟ್‌ಗೆ ಹಾಜರು..

K 2 Kannada News
ರಾಯಚೂರು ಮೂಲದ ನಕ್ಸಲ್‌ ರಮೇಶ್‌ & ಕನ್ಯಾಕುಮಾರಿ ಕೋರ್ಟ್‌ಗೆ ಹಾಜರು..
WhatsApp Group Join Now
Telegram Group Join Now

K2kannadanews.in

Naxal appear court ನ್ಯೂಸ್ ಡೆಸ್ಕ್ : ಅಪಹರಣ (Kidnap) ಮತ್ತು ಕೊಲೆ (Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ (Parappana agrahara) ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಕ್ಸಲ್‌ ಸದಸ್ಯರಾದ ಕನ್ಯಾಕುಮಾರಿ ಮತ್ತು ರಮೇಶ್‌ (ಶಿವ ಕುಮಾರ್‌) ಅವರನ್ನು ಸೆ. 23ರಂದು ಬಿಗಿ ಭದ್ರತೆಯೊಂದಿಗೆ ಕಾರ್ಕಳ ನ್ಯಾಯಾಲಯಕ್ಕೆ (Court) ಹಾಜರುಪಡಿಸಲಾಯಿತು.

ಇನ್ನೂ 2011ರ ನವೆಂಬರ್ 19ರಂದು ಹೆಬ್ರಿ ತಾಲೂಕು ಕಬ್ಬಿನಾಲೆ ಬಳಿ ಸದಾಶಿವ ಗೌಡರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಯಿತು. ಸದಾಶಿವ ಗೌಡ ಅವರನ್ನು ಕನ್ಯಾಕುಮಾರಿಯನ್ನೊಳಗೊಂಡ ನಕ್ಸಲ್‌ ತಂಡ ಅಪಹರಿಸಿ ಗುಂಡು ಹಾರಿಸಿ ಕೊಲೆ ನಡೆಸಿತ್ತು ಎಂಬ ಆರೋಪವಿದೆ. ಕಾರ್ಕಳ ಡಿವೈಎಸ್ಪಿ (DYSP) ಅರವಿಂದ್‌ ಎನ್‌. ಕಲಗುಜ್ಜಿ ನೇತೃತ್ವದ ತಂಡ ತೀವ್ರ ವಿಚಾರಣೆ ನಡೆಸಿತು. ಕಾರ್ಕಳದ ಈದುವಿನಲ್ಲಿ 2003ರ ನ. 13ರಂದು ನಕ್ಸಲರ ವಿರುದ್ಧ ಮೊದಲ ಎನ್‌ಕೌಂಟರ್‌ ನಡೆದಿತ್ತು. ಘಟನೆಯಲ್ಲಿ ಕೊಪ್ಪದ (Koppa) ಪಾರ್ವತಿ ಮತ್ತು ರಾಯಚೂರಿನ (Raichur) ಹಾಜಿಮಾ ಎಂಬಿಬ್ಬರು ಮೃತಪಟ್ಟಿದ್ದರು. ಯಶೋದಾಳ ಕಾಲಿಗೆ ಗುಂಡು (Bullet) ಬಿದ್ದಿತ್ತು. ಬಳಿಕ ಪೊಲೀಸರ (Police) ಕೈಗೆ ಸಿಕ್ಕಿಬಿದ್ದ ಯಶೋದಾಳ ಪರಿಸ್ಥಿತಿಯಿಂದ ನೊಂದು ಕನ್ಯಾಕುಮಾರಿಯೂ ನಕ್ಸಲ್‌ ಹಾದಿ ಹಿಡಿದಿದ್ದಳು ಎನ್ನಲಾಗುತ್ತಿದೆ.

ರಾಯಚೂರು ಮೂಲದ ಶಿವಕುಮಾರ್‌ ಆಂಧ್ರದ (Andra) ಕ್ರಾಂತಿಕಾರಿ ಕವಿ ಗದ್ದರ್‌ ಪ್ರಭಾವಕ್ಕೆ ಒಳಗಾಗಿ ರಮೇಶ್‌ ಎಂಬ ಹೆಸರಿನಲ್ಲಿ ನಕ್ಸಲ್‌ ಸಂಘಟನೆ ಸೇರಿ ಬಂದೂಕು ಕೈಗೆತ್ತಿಕೊಂಡಿದ್ದರು. ಬೆಂಗಳೂರಿನ ಕೊಳೆಗೇರಿಯಲ್ಲಿ ವಾಸವಿದ್ದ ಈತ ಬಳಿಕ ಹಾಸ್ಟೆಲ್‌ ವಿದ್ಯಾರ್ಥಿಗಳನ್ನು ಸಂಘಟಿಸಿ ಆಂಧ್ರ ಗಡಿಭಾಗದ ರೈತ ಕೂಲಿ ಕಾರ್ಮಿಕ ಸಂಘಟನೆಯ ಭೂ ಹೋರಾಟದಲ್ಲಿ ತೊಡಗಿಸುವ ಮೂಲಕ ಹಲವರು ನಕ್ಸಲ್‌ ಚಟುವಟಿಕೆಗೆ ಆಕರ್ಷಣೆಗೆ ಒಳಗಾಗುವಂತೆ ಮಾಡಿದ್ದ. ಈತನ ಮೇಲೆ ಹಲವು ಪ್ರಕರಣಗಳು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ದಾಖಲಾಗಿವೆ. ಈತನ ಪತ್ನಿ ಈದು ಎನ್‌ಕೌಂಟರ್‌ನಲ್ಲಿ ಹತಳಾಗಿದ್ದ ಪಾರ್ವತಿ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿತ್ತು. ಇದೀಗ ಇಬ್ಬರನ್ನೂ ಪೊಲೀಸರು ಕಾರ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

WhatsApp Group Join Now
Telegram Group Join Now
Share This Article