K2kannadanews.in
Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆದ ಸುದ್ದಿಗಳ ರೌಂಡ ಅಪ್ (Round Up) ನಿಮ್ಮ k2 ಎಕ್ಸ್‌ಪ್ರೆಸ್ ನಲ್ಲಿ ವೀಕ್ಷಿಸಿ..
ದೇಶದ ಏಕೈಕ ಚಿನ್ನದ ಗಣಿ ಕಂಪನಿ ಇದೀಗ ಐತಿಹಾಸಿಕ ಚಿನ್ನ ಉತ್ಪಾದನೆಯತ್ತ ದಾಪುಗಾಲು ಹಾಕುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ 5 ತಿಂಗಳಲ್ಲಿ ಹಟ್ಟಿ ಚಿನ್ನದಗಣಿ ಕಂಪನಿ 613.686 ಕೆಜಿ ಗುರಿ ಪೈಕಿ 597.772 ಕೆಜಿ ಚಿನ್ನ ಉತ್ಪಾದಿಸಿದೆ ಎಂದು ಹೇಳಲಾಗುತ್ತಿದೆ..
ನಗರದ ಬೋಳಮಾನ ದೊಡ್ಡ ರಸ್ತೆಯಲ್ಲಿ ಬರುವ ಆಶೀರ್ವಾದ ನಗರ ನಿವೇಶನ ಮಾಲೀಕರಿಗೆ ಮೂರು ತಿಂಗಳದೊಳಗೆ ಅವರವರ ನಿವೇಶನ ಹಿಂದಿರುಗಿಸುವಂತೆ ನ್ಯಾಯಲಯ ಆದೇಶಿಸಿದೆ ಎಂದು ನ್ಯಾಯ ವಾದಿಗಳಾದ ಸಿ ಎಸ್ ರಸ್ತಾರ್ಪು ಹೇಳಿದರು..
ರಾಯಚೂರು ತಾಲೂಕಿನ ದೇವಸುಗೂರು ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಸೇತುವೆಗೆ ಹಾನಿ ಮಾಡುತ್ತಿರುವ ಕಾಮಗಾರಿ ನಡೆಯುತ್ತಿದೆ. ಫೈಬರ್ ಕೇಬಲ್ ಹಾಕುವ ನಿಟ್ಟಿನಲ್ಲಿ, ಸೇತುವೆ ಮೇಲೆ ಮಳೆ, ಸ್ಕ್ರೂ ಗಳನ್ನ ಅಳವಡಿಸಲಾಗುತ್ತಿದೆ. ಇದರಿಂದ ಸೇತುವೆಯ ಕಲ್ಲುಗಳು ಬೀಳುತ್ತಿದ್ದರು ಕೂಡ ಕ್ಯಾರೆ ಎನ್ನದೆ ಕಾಮಗಾರಿ ಮಾಡುತ್ತಿದ್ದಾರೆ.
ಇಪಿಎಫ್ ಭವಿಷ್ಯ ನಿಧಿ ಪಿಂಚಣಿದಾರರು ನಮ್ಮ ಪಾಲಿನ ಹಕ್ಕಿಗಾಗಿ ಹೋರಾಟ ನಡೆಸುತಿದ್ದು, ಸಂಘಟನೆ ಬಲಪಡಿಸುವ ಮೂಲಕ ನಮ್ಮ ಶಕ್ತಿಯನ್ನು ಕೇಂದ್ರಕ್ಕೆ ಮುಟ್ಟಿಸಬೇಕಾಗಿದೆ, ಈಗಾಗಲೇ ಕೇಂದ್ರ ಹಣಕಾಸು ಸಚಿವರು ಪ ಭರವಸೆ ನೀಡಿದ್ದು ಹೋರಾಟಕ್ಕೆ ಶಕ್ತಿ ಬಂದಿದೆ.