K2kannadanews.in
Farmer robot ವೈರಲ್ ವೀಡಿಯೋ : ಕೃಷಿ (Agriculture) ಕ್ಷೇತ್ರಕ್ಕೂ ರೋಬೋಟ್ (Robot) ಲಗ್ಗೆ ಇಟ್ಟಿದ್ದು, ಹೊಲದಲ್ಲಿ (Land) ರೈತನಂತೆ (Farmer) ರೋಬೋಟ್ ದುಡಿಯುವ (Working) ವಿಡಿಯೋವೊಂದು ವೈರಲ್ ಆಗಿದೆ. ವೈರಲ್ (Viral) ಆಗಿರುವ ವಿಡಿಯೋದಲ್ಲಿ ರೋಬೋಟ್ ರೈತನನ್ನೇ ಮೀರಿಸುವಂತೆ ಹೊಲದಲ್ಲಿ ದುಡಿಯುತ್ತಿರುವುದನ್ನು ಕಾಣಬಹುದು.
@InterestingSTEM ಎಂಬ ಎಕ್ಸ್ (X) ಖಾತೆಯಲ್ಲಿ ವಿಡಿಯೋ (shared) ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ನಾಟಿ ಮಾಡುವುದು, ಬೆಳೆಗಳಿಗೆ ನೀರುಣಿಸುವುದು, ಬೆಳೆ ಕೊಯ್ಲು ಹೀಗೆ ಒಬ್ಬ ರೈತ ಹೊಲದಲ್ಲಿ ಏನೆಲ್ಲ ಕೆಲಸ ಮಾಡಬಲ್ಲನೋ ಅದೆಲ್ಲವನ್ನೂ ಈ ರೋಬೋಟ್ ಮಾಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಹಿದೆ. ವಿಡಿಯೋ ಹಂಚಿಕೊಂಡ ಕೇವಲ ಕೆಲವು ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.