K2kannadanews.in
Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆದ ಸುದ್ದಿಗಳ ರೌಂಡ ಅಪ್ (Round Up) ನಿಮ್ಮ k2 ಎಕ್ಸ್‌ಪ್ರೆಸ್ ನಲ್ಲಿ ವೀಕ್ಷಿಸಿ..
ರಾಜ್ಯ ಸರಕಾರ ರಾಯಚೂರು ಜಿಲ್ಲೆಯ ಗಿಲ್ಲೇಸೂಗೂರು ಹೋಬಳಿ ಕೇಂದ್ರವನ್ನು, ಹೊಸ ತಾಲೂಕನ್ನಾಗಿ ಘೋಷಣೆ ಮಾಡಬೇಕು ಎಂದು ಗಿಲ್ಲೇಸೂಗೂರು ಹೋಬಳಿ ಗ್ರಾಮಸ್ಥರು ಪತ್ರಿಕಾಘೊಷ್ಟಿ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು..
ಒಳಮೀಸಲಾತಿ ಜಾರಿಗೊಳಿಸುವ ಕುರಿತು ಸೆಪ್ಟಂಬರ್ 20ರಂದು ವಿಚಾರ ಗೋಷ್ಠಿ ಹಾಗೂ ನೂತನವಾಗಿ – ಆಯ್ಕೆಗೊಂಡ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ ಹಾಗೂ ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ ಅವರಿಗೆ ಸನ್ಮಾನ ಕಾರ್ಯಮವನ್ನು ನಗರದ ಪಬ್ಲಿಕ್ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ ಎಂದು ಆದಿಜಾಂಬವ ಸೇವಾ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ರಾಮಣ್ಣ ಹೇಳಿದರು.
ರಾಯಚೂರು ನಗರ ಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿದೆ, ಇಂದು ಸ್ಥಳಿಯರ ಬಹುದಿನಗಳ ಬೆಡಿಕೆಯನ್ನು ಸರಕಾರ ಈಡೇರಿಸಿದೆ ಎಂದು ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಹೇಳಿದರು..
ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸಂವಿಧಾನ ವಿರೋಧಿ ಎಂದು ಸುಳ್ಳು ಪ್ರಚಾರ ಮಾಡಿ, ಹೆಚ್ಚುವರಿಯಾಗಿ 30 ಸ್ಥಾನ ಪಡೆದು, ವಿರೋಧ ಪಕ್ಷ ಸ್ಥಾನ ಪಡೆದುಕೊಂಡ ನಂತರ, ಮೀಸಲಾತಿ ವಿರೋಧಿ ಹೇಳಿಕೆ ಮೂಲಕ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಅವರ ಮುಖವಾಡ ಬಹಿರಂಗವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ನಗರ ಶಾಸಕರಾದ ಡಾ.ಶಿವ ರಾಜ್ ಪಾಟೀಲ್ ಅವರು ಆರೋಪಿಸಿದರು.
ರಾಯಚೂರು ಸ್ಪಿನ್ನಿಂಗ್ ಮಿಲ್ ಸಂರಕ್ಷಣೆ ಮತ್ತು ಕಾರ್ಮಿಕರ ಹಿತರಕ್ಷಣೆಗಾಗಿ ಇಂದು ರಾಯ ಚೂರು ಸ್ಪಿನ್ನಿಂಗ್ ಮಿಲ್ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಕಂಪನಿಯಲ್ಲಿ ಹಿಂದೆ ಕೆಲಸ ಮಾಡಿದ ಕಾರ್ಮಿಕರಿಗೆ ಪಿ ಎಫ್ ಸೇರಿದಂತೆ ಬಾಕಿ ಹಣ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು.