K2kannadanews.in
House Robbery ರಾಯಚೂರು : ಮನೆ ಬಾಗಿಲು ಮುರಿದು ಒಳ ನುಗ್ಗಿದ ದರೋಡೆಕೋರರು ಮನೆಯವರನ್ನು ಕಟ್ಟಿಹಾಕಿ ಚಿನ್ನ ಬೆಳ್ಳಿ ಹಣ ದರೋಡೆ ಮಾಡಿದ ಘಟನೆ ಬೆಳ್ಳಂಬೆಳಗ್ಗೆ ರಾಯಚೂರು ನಗರವಾಸಿಗಳನ್ನು ಬೆಚ್ಚಿ ಬೆಳಿಸಿದೆ.
ರಾಯಚೂರು ನಗರದ ಲಕ್ಷ್ಮಿ ನರಸಿಂಹ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಜನರನ್ನು ಬೆಚ್ಚಿ ಬೆಳೆಸಿದ ದರೋಡೆ ಮಾಡಲಾಗಿದೆ. ದರೋಡೆ ಘಟನೆ ನೋಡಿದರೆ ಇದು ಒಂದು ಪ್ರೀಪ್ಲಾನ್ ಎಂದು ಅನುಮಾನಗಳು ಬರುತ್ತವೆ. ಕಪ್ಪು ಬಟ್ಟೆ ಧರಿಸಿ ದರೋಡೆಗೆ ಇಳಿದಿದೆ ಗ್ಯಾಂಗ್. ದರೋಡೆಗೆ ನಗ್ಗುವ ಮುನ್ನ ಆ ರಸ್ತೆಯಲ್ಲು ಬರುವ ಅಕ್ಕಪಕ್ಕದ ಮನೆಗಳಿಗೆ ಹೊರಗಿಂದ ಲಾಕ್ ಮಾಡಿದ್ದಾರೆ. ಅಲ್ಲದೇ ಆ ರಸ್ತೆಯಲ್ಲಿನ ಕಂಬಗಳ, ಮನೆಗಳ ಮುಂದಿನ ಲೈಟ್ ಗಳನ್ನು ಆಫ್ ಮಾಡಿದ್ದಾರೆ. ದರೋಡೆಕೋರರ ಈ ಒಂದು ಚಲನವಲನ ಸಿ ಸಿ ಕ್ಯಾಮೆರಾದಲ್ಲಿ ಸರಿಯಾಗಿದೆ.
ತದನಂತರ ಮನೆ ಬಾಗಿಲು ಮುರಿದು ಒಳ ನುಗ್ಗಿದ ದರೋಡೆಕೋರರು. ಮನೆಯವರನ್ನು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಟ್ಟಿ ಹಾಕಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಬಸನಗೌಡ ಎಂಬುವವರ ಮೆನೆ ದರೋಡೆ ಮಾಡಿದ್ದಾರೆ. ಈ ವೇಳೆ 22 ತೊಲೆ ಬಂಗಾರ, 2ಕೆಜಿ ಬೆಳ್ಳಿ, 2 ಲಕ್ಷ ನಗದು ದರೋಡೆ ಮಾಡಲಾಗಿದೆ ಎನ್ನಲಾಗುತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅವರು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆ ಪೊಲೀಸರು ಸ್ಥಳದಲ್ಲಿ ಶೋಧಕಾರ್ಯ ನಡೆಸಿದ್ದು ಮಾಹಿತಿ ಕಲೆಹಾಕುತ್ತಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದಲೂ ಶೊಧಕಾರ್ಯ ನಡೆದಿದ್ದು, ಈ ಒಂದು ಘಟನೆ ಯಿಂದ ಸುತ್ತಮುತ್ತಲನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.