ಕಾರು ಬಸ್ ನಡುವೆ ಭೀಕರ ಅಪಘಾತ ಹಳೇ ವಿಡಿಯೋ ಮತ್ತೆ ವೈರಲ್..

K 2 Kannada News
ಕಾರು ಬಸ್ ನಡುವೆ ಭೀಕರ ಅಪಘಾತ ಹಳೇ ವಿಡಿಯೋ ಮತ್ತೆ ವೈರಲ್..
WhatsApp Group Join Now
Telegram Group Join Now

K2kannadanews.in

Viral news ಹರಿಯಾಣ : ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಸಾಮಾನ್ಯವಾಗಿವೆ. ನಿಧಾನವೇ ಪ್ರಧಾನ ಅಂತ ಅದಷ್ಟೇ ಜಾಗೃತಿ ಮೂಡಿಸಿದರು ಪ್ರಯೋಜನೆ ಆಗುತ್ತಿಲ್ಲ. ಅಜಾ ಗುರುಕಥೆ ಚಾಲನೆ ಎಂದರು ದುರದೃಷ್ಟದಿಂದಲೂ ಅಪಘಾತಗಳು ಹೆಚ್ಚಾಗುತ್ತಿವೆ. ಅಂತದ್ದೇ ಒಂದು ಹಳೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

2022 ಹರಿಯಾಣದ ಕೈತಾಲ್‌ ಜಿಲ್ಲೆಯಲ್ಲಿ ಈ ಒಂದು ಅಪಘಾತ ನಡೆದಿತ್ತು. ಕಾರೊಂದು ಬಸ್ಸಿನ ಹಿಂದೆ ಹೋಗಿ ಮುಂದಿನ ವಾಹನವನ್ನು ಓವರ್‌ ಟೇಕ್‌ ಮಾಡುವ ಬರದಲ್ಲಿ, ಮುಂದೆ ವೇಗವಾಗಿ ಬರುತ್ತಿದ್ದ ಬಸ್ಸಿಗೆ ಡಿಕ್ಕಿಹೊಡೆದ ವಿಡಿಯೋ ಒಂದು ಇದೀಗ ಮತ್ತೆ ವೈರಲ್ ಆಗಿದೆ.

Xನಲ್ಲಿ ಈ ವಿಡಿಯೋ ben_dang22 ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ವೇಗವಾಗಿ ಬಂದಂತಹ ಕಾರು ಓವರ್‌ ಟೇಕ್‌ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದು ಕಾಣಬಹುದಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಭೀಕರ ಅಪಘಾತ ವೀಡಿಯೋನೋಡಿ ನೆಟ್ಟಿಗರು ಶಾಕ್‌ ಆಗಿದ್ದು, ರಸ್ತೆಯಲ್ಲಿ ಸೂಕ್ಷ್ಮ ಚಾಲನೆ ಮಾಡುವಂತೆ ಸಾಕಷ್ಟು ಕಮೆಂಟ್ಗಳು ಬರುತ್ತಿವೆ.

WhatsApp Group Join Now
Telegram Group Join Now
Share This Article