K2kannadanews.in
Double duty ರಾಯಚೂರು : ಇಲ್ಲೊಬ್ಬ ವ್ಯಕ್ತಿ (man) ಗ್ರಾಮ ಪಂಚಾಯಿತಿಯಲ್ಲಿ (Gramapnchayt) ಕಸವಿಲೆವಾರಿ ವಾಹನದ ಚಾಲಕ (Driver), ಅತ್ತ ಶಾಲೆಯಲ್ಲಿ (School) ಎಸ್ಡಿಎಂಸಿ ಅಧ್ಯಕ್ಷ. ಹೀಗೆ ಎರಡು ಕಡೆ ಏಕಕಾಲಕ್ಕೆ ಕೆಲಸ ಮಾಡಬಹುದಾ ಅನ್ನೊದು ಗ್ರಾಮಸ್ಥರ ಪ್ರಶ್ನೆ (Question). ಆದ್ರೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೂ (officers) ಮಾಡಬಹುದಾ ಅನ್ನು ಗೊಂದಲ. ಇವುಗಳಿಂದ ಮುಜುಗರಕ್ಕಿಡಾಗುತ್ತಿರುವ ಗ್ರೇಡ್ ಸಿ ಮತ್ತು ಗ್ರೇಡ್ 2 ಅಧಿಕಾರಿಗಳು.
ಹೌದು ಈ ಒಂದು ಘಟನೆ ನಮಗೆ ಕಾಣಸಿಗೋದು ರಾಯಚೂರು (Raichur) ತಾಲ್ಲೂಕಿನ ಗಾಣದಾಳ (Ganadal) ಗ್ರಾಮದಲ್ಲಿ. ಗಾಣದಾಳ ಗ್ರಾಮ ಪಂಚಾಯತಿಯಲ್ಲಿ ಆಂಜನೇಯ (ಫಾರಕ್) ಎಂಬ ವ್ಯಕ್ತಿ ಕಸವಿಲೇವಾರಿ ವಾಹನದ (vehicle) ಚಾಲಕನಾಗಿ ತಿಂಗಳ ಸಂಬಳಕ್ಕೆ ಕಾರ್ಯ ನಿರ್ವಹಿಸುತ್ತಿದ್ದಾನೆ. ಅಷ್ಟೇ ಅಲ್ಲ ಇದೇ ಗ್ರಾಮದ ಹೈಯರ್ ಪ್ರೈಮರಿ ಶಾಲೆಯ ಎಸ್ಡಿಎಂಸಿ (SDMC) ಅಧ್ಯಕ್ಷರಾಗಿದ್ದಾರೆ. ಹೀಗೆ ಎರಡು ಕಡೆ ಕೆಲಸ ಮಾಡುವುದು ಎಷ್ಟರ ಮಟ್ಟಿಗೆ ಸೂಕ್ತ ಎನ್ನುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಇನ್ನೊಂದು ಕಡೆ ಗ್ರೇಡ್ ಸಿ ಮತ್ತು ಗ್ರೇಡ್ 2 ಅಧಿಕಾರಿಗಳಿಗೆ ಮುಜುಗರಕ್ಕೀಡು ಮಾಡುತ್ತಿವೆ.
ಇತ್ತೀಚಿಗೆ ಸ್ವಾತಂತ್ರ್ಯ ದಿನೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಆಹ್ವಾನಿಸಲಾಗಿತ್ತು. ಅದೇ ಗ್ರಾಮ ಪಂಚಾಯತಿಯಲ್ಲಿ ಡಿ ಗ್ರೂಪ್ ನೌಕರನಾದ ಆಂಜನೇಯ ಜೊತೆಗೆ ವೇದಿಕೆ ಹಂಚಿಕೊಳ್ಳಲು ಮುಜುಗರವಾಗಿ, ಪಂಚಾಯತಿ ದಗವಜಾರೋಹಣ ಮುಗಿಸಿಕೊಂಡು, ಆ ಒಂದು ಶಾಲೆಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೈರಾಗಿರುವ ಘಟನೆಯ ನಡೆದಿದೆ. ಅದ್ರೆ ಇಲ್ಲಿ ನಿಯಮ ಪ್ರಕಾರ ಹೀಗೆ ಸಿಬ್ಬಂದಿ ಅಧ್ಯಕ್ಷರಾಗಬಹುದೇ ಎಂಬುದು ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.