ಚಂಡಮಾರುತಕ್ಕೆ ತತ್ತರಿಸಿದ ಚೀನಾ : ಮೊಬೈಲ್ ಚಾರ್ಜ್ ಗೆ ಜನ ಮಾಡಿದ್ದೇನು ಗೊತ್ತಾ..?

K 2 Kannada News
ಚಂಡಮಾರುತಕ್ಕೆ ತತ್ತರಿಸಿದ ಚೀನಾ : ಮೊಬೈಲ್ ಚಾರ್ಜ್ ಗೆ ಜನ ಮಾಡಿದ್ದೇನು ಗೊತ್ತಾ..?
WhatsApp Group Join Now
Telegram Group Join Now

K2kannadanews.in

Chain storm ವೈರಲ್ ವೀಡಿಯೋ : ಚೀನಾದಲ್ಲಿ ಭಾರೀ ಚಂಡಮಾರುತದಿಂದಾಗಿ ಜನ ಕರೆಂಟ್‌ ಇಲ್ಲದೆ ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳಲು ಪರದಾಡುತ್ತಿರುವ ವೀಡಿಯೋ ಸಾಕಷ್ಟು ವೈರಲ್ ಆಗಿದೆ. ಅಲ್ಲಿನ ಜನರ ಪರದಾಟ ನಿವೇ ನೋಡಿ.

ಚೀನಾದಲ್ಲಿ ಚಂಡ ಮಾರುತದಿಂದ ಆಗಿರುವ ಸಮಸ್ಯೆ ಅಷ್ಟಿಷ್ಟಲ್ಲ. ಈ ಬಗ್ಗೆ ಪೋಸ್ಟ್‌ ಒಂದು songpinganq ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಚಂಡ ಮಾರುತದ ನಂತರ ವಿದ್ಯುತ್‌ ಕಡಿತಗೊಂಡ ಕಾರಣ ಮೊಬೈಲ್‌ನಲ್ಲಿ ಚಾರ್ಜ್‌ ಇಲ್ಲದೆ, ಚೀನಾದ ಹೈನಾನ್‌ ಪ್ರಾಂತ್ಯದಲ್ಲಿ ಭಾರೀ ಪ್ರಮಾಣದಲ್ಲಿ ಟೈಪೂನ್‌ ಯಾಗಿ ಚಂಡಮಾರುತ ಕಾಣಿಸಿಕೊಂಡಿದ್ದು, ಚಂಡ ಮಾರುತ ಅಪ್ಪಳಿಸಿದ ಪರಿಣಾಮ ವಿದ್ಯುತ್‌ ಸಂಪರ್ಕಗಳೇ ಕಡಿತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆನ್‌ಲೈನ್‌ ಪೇಮೆಂಟ್ ವ್ಯವಹಾರಗಳಿಗೆ ಅವಲಂಬಿತವಾಗಿರುವ ಇಲ್ಲಿನ ಜನ ಕರೆಂಟ್‌ ಇಲ್ಲದೆ, ಮೊಬೈಲ್‌ ಚಾರ್ಜ್‌ ಇಲ್ಲದೆ ಊಟಕ್ಕೂ ಕೂಡಾ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಹೈನಾನ್‌ ಪ್ರಾಂತ್ಯದ ಅಲ್ಲಲ್ಲಿ ಚಾರ್ಜಿಂಗ್‌ ಸ್ಟೇಷನ್‌ ತೆರೆದಿದ್ದು, ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳಲು ಜನ ಮುಗಿ ಬಿದ್ದಿದ್ದಾರೆ. ಚಂಡ ಮಾರುತದ ನಂತರ ವಿದ್ಯುತ್‌ ಕಡಿತಗೊಂಡ ಕಾರಣ ಮೊಬೈಲ್‌ನಲ್ಲಿ ಚಾರ್ಜ್‌ ಇಲ್ಲದೆ ಆನ್‌ಲೈನ್‌ ಪೇಮೆಂಟ್‌ ಮಾಡಲು ಸಾಧ್ಯವಾಗದೆ ಆಹಾರ ಖರೀದಿಸಲು ಪರದಾಡಿದ ಜನ‌ ಎಂಬ ಶಿರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

WhatsApp Group Join Now
Telegram Group Join Now
Share This Article