K2kannadanews.in
BJP Congress ಮಾನ್ವಿ : ಗಣೇಶ ಚತುರ್ಥಿ (ganesha chaturti) ರಾಜ್ಯಾದ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ಗಣೇಶ ವಿಸರ್ಜನೆಗೆ ಭಾಷಣಕಾರರನ್ನು (Speekars), ಗಣ್ಯರನ್ನು (VIPs), ರಾಜಕೀಯ (Politicians) ವ್ಯಕ್ತಿಗಳನ್ನು ಕರೆಸಿ ಭಾಷಣ (Speech) ಮಾಡಿಸುವ ಪ್ರತೀತಿ ಇದೆ. ಅದೇ ಒಂದು ಪ್ರತೀತಿ ಜಿಲ್ಲೆಯಲ್ಲಿ ವಿವಾದಕ್ಕೆ ಕಾರಣವಾಗಿದೆ.
ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ಪಟ್ಟಣದಲ್ಲಿ ಕಾಂಗ್ರೆಸ್ (Congress) ನಾಯಕರು ಆಯೋಜಿಸಿದ ಗಣೇಶೋತ್ಸವಕ್ಕೆ ಬೆಳ್ತಂಗಡಿಯ ಬಿಜೆಪಿ (BJP MLA) ಶಾಸಕ ಹರೀಶ್ ಪೂಂಜಾ (Garish ponja) ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದ್ದು ಇದೇ ವಿವಾದಕ್ಕೆ ಕಾರಣವಾಗಿದೆ. ದ್ವೇಷ ಭಾಷಣಕಾರ, ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೇ ಬೆದರಿಕೆ ಹಾಕುವ ಬಿಜೆಪಿ ಶಾಸಕನನ್ನು ಗಣೇಶೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕರೆದು ಸ್ವಾಗತಿಸುತ್ತಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ನಲ್ಲೇ ಅಸಮಾಧಾನ ವ್ಯಕ್ತವಾಗಿದೆ ಎಂದು ಮಾತನಾಡಿಕೊಳ್ಳಲಾಗುತ್ತಿದೆ.
ಬಿಜೆಪಿ ಶಾಸಕ ಹರೀಶ್ ಪೂಂಜಾ ಇರುವ ಫ್ಲೆಕ್ಸ್ (Flex) ನಲ್ಲಿ ಕಾಂಗ್ರೆಸ್ ನ ಸಚಿವರಾದ (Minister) ಎನ್ ಎಸ್ ಬೋಸರಾಜು, ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಶಾಸಕ (Congress MLA) ಹಂಪಯ್ಯ ಸಾಹುಕಾರ, ಕಾಂಗ್ರೆಸ್ ಎಮ್ಮೆಲ್ಸಿ (MLC) ಬಸನಗೌಡ ಬಾದರ್ಲಿ, ಸಚಿವವರ ಪುತ್ರ ರವಿ ಬೋಸರಾಜು ಹಾಗು ಕಾಂಗ್ರೆಸ್ ಮುಖಂಡ ಆಲ್ದಾಳ್ ವೀರಭದ್ರಪ್ಪ ಅವರ ಪುತ್ರ ಬಸವನ ಗೌಡ ಆಲ್ದಾಳ್ ಅವರ ಭಾವ ಚಿತ್ರ ಇರುವುದು ವಿವಾದಕ್ಕೆ ಕಾರಣವಾಗಿದೆ.